ಹಲೋ ಮೋದಿಜಿ..: ಫೋನ್ ಮೂಲಕ ಪ್ರಧಾನಿ ಜೊತೆ ಮಾಲ್ಡಿವ್ಸ್ ಬಿಕ್ಕಟ್ಟು ಕುರಿತು ಟ್ರಂಪ್ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Modi-and-Trump

ವಾಷಿಂಗ್ಟನ್, ಫೆ.9-ನಯನಮನೋಹರ ದ್ವೀಪರಾಷ್ಟ್ರ ಮಾಲ್ಡಿವ್ಸ್‍ನಲ್ಲಿ ಭುಗಿಲೆದ್ದಿರುವ ಗಂಭೀರ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆ ನಿವಾರಣೆಗಾಗಿ ಮಾರ್ಗೋಪಾಯಗಳ ಕುರಿತು ಉಭಯ ನಾಯಕರು ದೂರವಾಣಿ ಮುಖೇನ ಸಮಾಲೋಚನೆ ನಡೆಸಿದ್ದಾರೆ.  ಮಾಲ್ಡಿವ್ಸ್ ಬಿಕ್ಕಟ್ಟು ಕುರಿತು ಆತಂಕ ವ್ಯಕ್ತಪಡಿಸಿರುವ ಟ್ರಂಪ್ ಮತ್ತು ಮೋದಿ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಮತ್ತು ಕಾನೂನು-ನಿಯಮಗಳಿಗೆ ಯಾರೇ ಆಗಲಿ ಗೌರವ ನೀಡಬೇಕಾದ ಅಗತ್ಯವಿದೆ ಎಂಬುದನ್ನು ಪ್ರತಿಪಾದಿಸಿದ್ಧಾರೆ ಎಂದು ಶ್ವೇತಭವನದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನ ಪರಿಸ್ಥಿತಿ ಹಾಗೂ ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಭದ್ರತೆ ಬಲವರ್ಧನೆ ಕುರಿತು ಉಭಯ ನಾಯಕರು ಚರ್ಚಿಸಿದ ಸಂದರ್ಭದಲ್ಲೇ ಮಾಲ್ಡಿವ್ಸ್ ಬಿಕ್ಕಟ್ಟು ವಿಚಾರವೂ ಪ್ರಸ್ತಾಪವಾಯಿತು ಎಂದು ವೈಟ್‍ಹೌಸ್ ಹೇಳಿದೆ.  ಈ ವರ್ಷ ಟ್ರಂಪ್ ಮತ್ತು ಮೋದಿ ನಡುವೆ ನಡೆದ ಮೊದಲ ದೂರವಾಣಿ ಸಂಭಾಷಣೆ ಇದಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin