ಹಳಿತಪ್ಪಿದ ಮಹಾಕೌಶಲ್ ಎಕ್ಸ್ ಪ್ರೆಸ್ ರೈಲು , ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Mahakoushal

ನವದೆಹಲಿ, ಮಾ.30-ಜಬಲ್‍ಪುರ್‍ನಿಂದ ದೆಹಲಿಗೆ ಸಂಚರಿಸುತ್ತಿದ್ದ ಮಹಾಕೌಶಲ್ ಎಕ್ಸ್‍ಪ್ರೆಸ್ ರೈಲಿನ ಆರು ಬೋಗಿಗಳು ಹಳಿ ತಪ್ಪಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕಲ್ಪಹಾರ್‍ನಲ್ಲಿ ಇಂದು ಮುಂಜಾನೆ ಸಂಭವಿಸಿದೆ.   ಕಲ್ಪಹಾರ್‍ನಲ್ಲಿ ಮುಂಜಾನೆ 2 ಗಂಟೆಯಲ್ಲಿ ದುರ್ಘಟನೆ ಸಂಭವಿಸಿದೆ. ರೈಲು ಹಳಿ ತಪ್ಪಿದ ಪರಿಣಾಮ ಹಿಂಬದಿಯ ಆರು ಕೋಚ್‍ಗಳ ಹಳಿ ತಪ್ಪಿ ಅನೇಕರು ಗಾಯಗೊಂಡಿದ್ದಾರೆ. ಇವರಲ್ಲಿ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಹಾನಿಗೊಳಗಾಗದ ಬೋಗಿಗಳೊಂದಿಗೆ ಬೆಳಗ್ಗೆ 6.45ರಲ್ಲಿ ಮಹಾಕೌಶಲ್ ಎಕ್ಸ್‍ಪ್ರೆಸ್ ಪ್ರಯಾಣ ಮುಂದುವರಿಸಿತು ಎಂದು ಉತ್ತರ ರೈಲ್ವೆ ವಿಭಾಗದ ವಕ್ತಾರ ಮಂಜರ್ ಕರಾರ್ ತಿಳಿಸಿದ್ದಾರೆ.   ರೈಲು ಹಳಿ ತಪ್ಪಲು ಕಾರಣವಾದ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ರೈಲ್ವೆ ಮತ್ತು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಭೇಟಿ ನೀಡಿದ್ದರು. 30 ಆಂಬ್ಯುಲೆನ್ಸ್ ವಾಹನಗಳು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದವು. ಗಾಯಾಗಳುಗಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉನ್ನತಾಧಿಕಾರಿಗಳಿಗೆ ಸೂಚಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin