ಹಳಿ ತಪ್ಪಿದ ಕುರ್ಲಾ-ಅಂಬರ್‍ನಾಥ್ ಲೋಕಲ್ ರೈಲು : ಇಬ್ಬರ ಸಾವು, ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Train-01

ಕಾನ್ಪುರ, ಡಿ.29-ಕುರ್ಲಾ-ಅಂಬರ್‍ನಾಥ್ ಸ್ಥಳೀಯ ರೈಲಿನ ಐದು ಬೋಗಿಗಳು ಹಳಿ ತಪ್ಪಿದ ಘಟನೆ ಇಂದು ಮುಂಜಾನೆ 5.53ರ ಸಮಯದಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಮತ್ತು ವಿಠ್ಠಲ್‍ವಾಡಿ ರೈಲ್ವೆ ನಿಲ್ದಾಣಗಳ ನಡುವೆ ಸಂಭವಿಸಿದೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.  ರೈಲು ಹಳಿ ತಪ್ಪಿದ ಕಾರಣ ಮುಂಬೈ ಸಬ್‍ಅರ್ಬನ್ ರೈಲ್ವೆಯ ಸೆಂಟ್ರಲ್ ಲೈನ್ ಮಾರ್ಗದಲ್ಲಿ ಇತರ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಇದೇ ಕಾರಣಕ್ಕಾಗಿ ಕಲ್ಯಾಣ್-ಕರ್ಜತ್ ಮಾರ್ಗದ ಸೇವೆಗಳನ್ನು ಸಹ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಜ್ಮೀರ್-ಸೀಲ್ಡಾಹ್ ಎಕ್ಸ್‍ಪ್ರೆಸ್ ರೈಲಿನ 15 ಬೋಗಿಗಳು ಹಳಿ ತಪ್ಪಿ ಇಬ್ಬರು ಮೃತಪಟ್ಟು, 60ಕ್ಕೂ ಹೆಚ್ದು ಪ್ರಯಾಣಿಕರು ಗಾಯಗೊಂಡಿರುವ ದುರ್ಘಟನೆ ನಿನ್ನೆ ಮುಂಜಾನೆ ಕಾನ್ಪುರ್ ದೆಹಟ್ ಜಿಲ್ಲೆಯ ರೂರಾ ಬಳಿ ಸಂಭವಿಸಿತ್ತು. ಅದರ ಹಿಂದೆಯೇ ಇಂದು ಮತ್ತೊಂದು ರೈಲು ಹಳಿ ತಪ್ಪಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin