ಹಳೆಯ ನೋಟುಗಳನ್ನು ಸ್ವೀಕರಿಸದಿದ್ದಕ್ಕೆ ಆರ್‍ಬಿಐ ಕಚೇರಿಯಲ್ಲೇ ಬೆತ್ತಲಾದ ಮಹಿಳೆ ..!

ಈ ಸುದ್ದಿಯನ್ನು ಶೇರ್ ಮಾಡಿ

Women-nacked

ನವದೆಹಲಿ, ಜ.6-ನೋಟು ರದ್ದತಿ ನಂತರ ದೇಶದ ವಿವಿಧೆಡೆ ವಿಲಕ್ಷಣ ಘಟನೆಗಳೂ ನಡೆಯುತ್ತಿವೆ. ನೋಟು ಬದಲಿಸಿಕೊಳ್ಳಲು ಅವಕಾಶ ದೊರೆಯದೇ ಹತಾಶಳಾದ ಮಹಿಳೆಯೊಬ್ಬಳು ಭಾರತೀಂಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಕಚೇರಿಯಲ್ಲೇ ಅರೆನಗ್ನಳಾಗಿ ಪ್ರತಿಭಟನೆ ನಡೆಸಿದ ಘಟನೆ ನವದೆಹಲಿಯ ನಂಗ್ಲೋಯಿಯಲ್ಲಿ ನಡೆದಿದೆ.  ನಂಗ್ಲೋಯಿ ನಿವಾಸಿಯಾದ ಇಬ್ಬರು ಮಕ್ಕಳ ತಾಯಿಯಾದ ಈಕೆ ತನ್ನ ಬಳಿಯಿದ್ದ ಒಂದು 1,000 ರೂ.ಗಳು ಮತ್ತು ನಾಲ್ಕು 500 ರೂ.ಗಳ ನೋಟುಗಳನ್ನು ಬದಲಿಸಿಕೊಳ್ಳಲು ಆರ್‍ಬಿಐ ಶಾಖೆಯ ಕೌಂಟರ್‍ನಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಳು.

ಹಲವು ಗಂಟೆಗಳ ಕಾದು ಬಸವಳಿದ ಈಕೆಯ ಸರದಿ ಬಂದಾಗ ತನ್ನ ಎರಡು ವರ್ಷದ ಮಗುವಿನ ಪ್ಯಾಂಟ್ ಜೇಬಿನಲ್ಲಿದ್ದ ಹಳೆಯ ನೋಟುಗಳನ್ನು ತೆಗೆದಳು. ಈ ನೋಟುಗಳ ಒಂದು ಭಾಗವನ್ನು ಇಲಿ ತಿಂದಿದ್ದವು. ಆದಾಗ್ಯೂ ಬ್ಯಾಂಕ್ ಸಿಬ್ಬಂದಿ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ಗುರುತಿನ ಪತ್ರವನ್ನು ಕೇಳಿದರು. ಮಹಿಳೆ ಬಳಿ ಇರಲಿಲ್ಲ. ಹೀಗಾಗಿ ನೋಟು ಬದಲಿಸಲು ನಿರಾಕರಿಸಿದರು. ಇದರಿಂದ ಹತಾಶೆಗೊಂಡ ಮಹಿಳೆ ಹೊಸ ನೋಟು ನೀಡುವಂತೆ ಪಟ್ಟು ಹಿಡಿದಳು. ಸ್ಥಳದಿಂದ ಕದಲಲು ನಿರಾಕರಿಸಿದ ಈಕೆಯನ್ನು ಪೊಲೀಸರು ಮಧ್ಯಪ್ರವೇಶಿಸಿ ಹೊರಗೆ ಕಳುಹಿಸಿದ್ದರು.

ಆದರೆ ಮರುದಿನ ಮತ್ತೆ ತನ್ನ 10 ವರ್ಷದ ಮಗನೊಂದಿಗೆ ಬ್ಯಾಂಕ್ ಶಾಖೆಯಲ್ಲಿ ಪ್ರತ್ಯಕ್ಷಳಾದ ಈಕೆ ನೋಟು ಬದಲಿಸುವಂತೆ ಬ್ಯಾಂಕ್ ಸಿಬ್ಬಂದಿಯನ್ನು ಪೀಡಿಸಿದಳು. ಗುರುತಿನ ಚೀಟಿ ಇಲ್ಲದೇ ಹಳೆ ನೋಟುಗಳನ್ನು ವಿನಿಮಯ ಮಾಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದಾಗ ಹತಾಶಗೊಂಡ ಈಕೆ ಅರೆನಗ್ನಳಾಗಿ ಪ್ರತಿಭಟನೆ ನಡೆಸಿದಳು. ಪೊಲೀಸರು ಮತ್ತೆ ಮಧ್ಯಪ್ರವೇಶಿಸಿ ಆಕೆಯನ್ನು ಸಮಾಧಾನಪಡಿಸಿ ಹೊರಗೆ ಕಳುಹಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin