ಹಳೆಯ 500-1000 ನೋಟುಗಳನ್ನು ತಿರುಪತಿ ಹುಂಡಿಗೆ ಹಾಕಬಹುದು

ಈ ಸುದ್ದಿಯನ್ನು ಶೇರ್ ಮಾಡಿ

Tirupathi

ಹೈದರಾಬಾದ್, ನ.12-ಚಲಾವಣೆ ಕಳೆದುಕೊಂಡಿರುವ 500 ಮತ್ತು 1000 ರೂ.ಗಳ ನೋಟುಗಳನ್ನು ಕಾಣಿಕೆ ಹುಂಡಿಗೆ ಹಾಕಬಹುದು ಎಂದು ತಿರುಪತಿ-ತಿರುಮಲ ಟ್ರಸ್ಟ್ ತಿಳಿಸಿದೆ.
ಅಮಾನ್ಯಗೊಂಡಿರುವ 500 ಮತ್ತು 1000 ನೋಟುಗಳನ್ನು ಹುಂಡಿಗೆ ಸಮರ್ಪಿಸಬಹುದಾಗಿದೆ. ದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಭಕ್ತಾದಿಗಳಿಂದ ಈ ನೋಟುಗಳನ್ನು ಸ್ವೀಕರಿಸಲಾಗುತ್ತಿಲ್ಲ. ಆದರೆ ತಿರುಪತಿ-ತಿರುಮಲ ಟ್ರಸ್ಟ್ ಈ ನೋಟುಗಳನ್ನು ಸ್ವೀಕರಿಸಲು ನಿರ್ಧರಿಸಿದ್ದು, ಭಕ್ತರು ನಿರಾಂತಕವಾಗಿ ಭಕ್ತರು ಹಳೆಯ 500 ಮತ್ತು 1000 ನೋಟುಗಳನ್ನು ಸಮರ್ಪಿಸಬಹುದಾಗಿದೆ.
ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತಾದಿಗಳು ತಮಗೆ ಇಷ್ಟವಾದ ಕಾಣಿಕೆಗಳನ್ನು ಸಲ್ಲಿಸಬಹುದಾಗಿದೆ ಎಂದು ಟಿಟಿಡಿ ಸದಸ್ಯ ಜೆ.ಶೇಖರ್ ತಿಳಿಸಿದ್ದಾರೆ.

ಹಾಲಿ ಇರುವ ಕಾಣಿಕೆ ಹುಂಡಿಗಳ ಜೊತೆಗೆ ಹೆಚ್ಚುವರಿ ಕಾಣಿಕೆ ಹುಂಡಿ ತೆರಯಲಾಗಿದ್ದು, ಹಳೆಯ ನೋಟುಗಳನ್ನು ಭಕ್ತರು ಈ ಹುಂಡಿಗಳಲ್ಲಿ ಹಾಕಬಹುದಾಗಿದೆ. ದಾನಗಳಿಗೆ ಹಾಗೂ ಚಾಲ್ತಿಯಲ್ಲಿರುವ ನೋಟುಗಳನ್ನೇ ನೀಡಬೇಕು ಎಂದು ತಿಳಿಸಿದ್ದಾರೆ. ಕಳೆದ ವರ್ಷ ತಿರುಪತಿಯಲ್ಲಿ ಸಾವಿರಾರು ಕೋಟಿ ರೂ. ಸಂಗ್ರಹವಾಗಿತ್ತು. ಈ ಸಂದರ್ಭದಲ್ಲಿ ಬರುವ ಕಾಣಿಕೆ ಸಂದರ್ಭದಲ್ಲಿ ಬರುವ ಹಣ ಬದಲಾವಣೆಗೆ ಟಿಟಿಡಿ ಆಂಧ್ರಬ್ಯಾಂಕ್‍ಗೆ ಮನವಿ ಮಾಡಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin