ಹಳೆ ಕಟ್ಟಡಗಳ ಮೇಲೆ ನಿಂತು ಜಂಬೂ ಸವಾರಿ ವೀಕ್ಷಣೆಗೆ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Dasara--01

ಮೈಸೂರು,ಸೆ.26- ಸಾಂಸ್ಕøತಿಕ ನಗರದಲ್ಲಿ ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಯನ್ನು ಸಾರ್ವಜನಿಕರು ಹಳೆ ಕಟ್ಟಡಗಳ ಮೇಳೆ ನಿಂತು ವೀಕ್ಷಿಸುವುದನ್ನು ಮಹಾನಗರ ಪಾಲಿಕೆ ನಿಷೇಧಿಸಿದೆ.  ಸೆ.30ರಂದು ನಡೆಯಲಿರುವ ದಸರೆಯ ಕೇಂದ್ರಬಿಂದುವಾಗಿರುವ ಜಂಬೂ ಸವಾರಿ ಮೆರವಣಿಗೆಯೂ ನಗರದ ಸಯ್ಯಾಜಿ ರಾವ್ ರಸ್ತೆ ಮಾರ್ಗವಾಗಿ ಸಾಗಲಿದ್ದು, ರಸ್ತೆಯ ಎರಡೂ ಬದಿಯ ಯಾವುದೇ ಹಳೆ ಕಟ್ಟಡಗಳ ಮೇಲೆ ನಿಂತು ಸಾರ್ವಜನಿಕರು ವೀಕ್ಷಿಸಬಾರದೆಂದು ಪಾಲಿಕೆ ಆಯುಕ್ತ ಜಗದೀಶ್ ಆದೇಶ ಹೊರಡಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ನಾಳೆ ಓಪನ್ ಸ್ಟ್ರೀಟ್ ಫೆಸ್ಟೀವಲ್ ಆಯೋಜಿಸಲಾಗಿದ್ದು, ನಗರದ ದೇವರಾಜ ಅರಸು ರಸ್ತೆಯಲ್ಲಿ ನಾಳೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿರುವ ಮಳಿಗೆಗಳು ಎಂದಿನಂತೆ ತೆರೆದಿರುತ್ತವೆ. ಹಾಗೂ ಕೆ.ಆರ್.ವೃತ್ತದಿಂದ ಜೆಎಲ್‍ಬಿ ರಸ್ತೆ ಜಂಕ್ಷನ್‍ವರೆಗೂ 60ಕ್ಕೂ ಹೆಚ್ಚು ಸ್ಟಾಲ್‍ಗಳು ಇರುತ್ತವೆ. ಇದರಲ್ಲಿ ಮನರಂಜನೆ, ಆಹಾರ ಮೇಳ, ಕಲಾಸಂತೆ, ಕರ್ನಾಟಕ ಸಂಸ್ಕøತಿ ಎಂಬ ವಿಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸ್ಟ್ರೀಟ್ ಫೇಸ್ಟಿವಲ್ ಆಯೋಜಿಸಿರುವ ಫೇಸ್-1 ಸಂಸ್ಥೆ ಆದಾಯದ ಶೇ.2ರಷ್ಟನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಪಾಲಿಕೆ ಮೇಯರ್ ರವಿಕುಮಾರ್ ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin