ಹಳೆ ದ್ವೇಷದ ಹಿನ್ನೆಲೆಯಲ್ಲಿ ಯೋಧನ ಮೇಲೆ ಗ್ರಾ.ಪಂ. ಸದಸ್ಯೆ ಕುಟುಂಬದವ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

Warrior

ಕೊರಟಗೆರೆ, ಜ.17- ಹಳೆ ವೈಷಮ್ಯದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯೆ ಕುಟುಂಬದವರು ಯೋಧನ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ನಡೆದಿದೆಗೋವಿಂದರಾಜು ಹಲ್ಲೆಗೆ ಒಳಗಾದ ಯೋಧ.ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಗೋವಿಂದರಾಜು ವಾರ್ಷಿಕ ರಜೆ ಮೇಲೆ ನಿನ್ನೆ ಗ್ರಾಮಕ್ಕೆ ಬಂದಿದ್ದಾರೆ.ಪಕ್ಕದ ರಾಯವಾರದಲ್ಲಿನ ಅತ್ತೆ ಹನುಮಕ್ಕ ಅವರ ಮನೆಗೆ ಹೋಗಿದ್ದು, ಅಲ್ಲಿ ಗ್ರಾಪಂ ಸದಸ್ಯೆ ಜಯಲಕ್ಷ್ಮಮ್ಮ ಹಾಗೂ ಕುಟುಂಬದವರು ಗೋವಿಂದರಾಜು ಮೇಲೆ ಹಲ್ಲೆ ನಡೆಸಿ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಐದು ಸಾವಿರ ರೂ. ಹಣ ಕಸಿದು ಪರಾರಿಯಾಗಿದ್ದಾರೆ.

ಈ ಸಂಬಂಧ ಯೋಧ ಗೋವಿಂದರಾಜು ಅವರು ಕೊರಟಗೆರೆ ಠಾಣೆಗೆ ಗ್ರಾಮ ಪಂಚಾಯ್ತಿ ಸದಸ್ಯೆ ಜಯಲಕ್ಷ್ಮಮ್ಮ, ಗಂಡ ರಾಮಕೃಷ್ಣ, ಅಳಿಯಂದಿರಾದ ಸಿದ್ದಗಂಗಯ್ಯ, ಹರೀಶ್, ಮಕ್ಕಳಾದ ನಾಗಮ್ಮ, ಅಂಬಿಕಾ ಅವರ ವಿರುದ್ಧ ದೂರು ನೀಡಿದ್ದಾರೆ.ಹಲ್ಲೆಯಿಂದ ಗಾಯಗೊಂಡಿರುವ ಯೋಧ ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin