ಹಳೆ ವೈಷಮ್ಯ :10ಕ್ಕೂ ಹೆಚ್ಚು ಮನೆಗಳನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

house-theft
ಬೇಲೂರು, ಮೇ 16- ಹಳೆಯ ವೈಷಮ್ಯಕ್ಕೆ ಗುಂಪೊಂದು  ಸುಮಾರು 10 ಮನೆಗಳ ಮೇಲೆ ಕಲ್ಲು ತೂರಿ, ಹಾರೆ ಗುದ್ದಲಿಗಳಿಂದ ಮನೆಯ ಬಾಗಿಲು ಕಿಟಕಿಗಳನ್ನು ಮುರಿದು ಒಳ ನುಗ್ಗಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ಮಾಡಿ ವಸ್ತುಗಳನ್ನೆಲ್ಲಾ ಧ್ವಂಸಗೊಳಿಸಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ತಾಲೂಕಿನ ಬಿ.ಹೊಸಳ್ಳಿ (ಬಳ್ಳೂರು ಪಾಳ್ಯ)ಗ್ರಾಮದಲ್ಲಿ ನಿನ್ನೆ ತಡರಾತ್ರಿ ಮನೆಯವರು ಮಲಗಿದ್ದ ಸಂದರ್ಭಧಲ್ಲಿ ಅದೇ ಗ್ರಾಮದ ಹೇಮರಾಜು ಮತ್ತು ಕಾಂತರಾಜುರವರು ತಮ್ಮ ಬೆಂಬಲಿಗರಾದ ಸುಮಾರು 30 ಜನರೊಂದಿಗೆ ವಾಹನದಲ್ಲಿ ಬಂದು ಗ್ರಾಮದ ಮನೆಗಳ ಮೇಲೆ ಕಲ್ಲು ತೂರಿದ್ದಲ್ಲದೆ, ಹಾರೆ ಪಿಕಾಸಿಗಳಿಂದ ಬಾಗಿಲು ಕಿಟಕಿಗಳನ್ನು ಮುರಿದು ಮನೆಯಲ್ಲಿ ಮಲಗಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಕೆಲವರು ಹೆದರಿ ಊರು ಬಿಟ್ಟು ಹೋಡಿ ಹೋಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳನ್ನು ಸಂಪೂರ್ಣವಾಗಿ ಹೊಡೆದು ಪುಡಿಪುಡಿ ಮಾಡಿ ಬೆದರಿಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ಗ್ರಾಮ ಪಂಚಾಯಿತಿ ಸದಸ್ಯ ರಾಜು ಮಾತನಾಡಿ, ನಮ್ಮ ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷರೊಬ್ಬರು ಜಮೀನಿನ ವಿಚಾರವಾಗಿ ಮುಖಂಡರೊಂದಿಗೆ ಮಾತನಾಡಿ, ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಕಳೆದ ರಾತ್ರಿ ಏಕಾಎಕಿ 30 ಜನರ ತಂಡದೊಂದಿಗೆ ಬಂದು ನಮ್ಮ ಮನೆಗಳು ಮತ್ತು ವಾಹನಗಳನ್ನೆಲ್ಲ ಧ್ವಂಸಗೊಳಿಸಿದ್ದಲ್ಲದೆ ನಮ್ಮ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.


ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ಬಿ.ಹೊಸಳ್ಳಿ ಗ್ರಾಮದಲ್ಲಿ ಸುಮಾರು ನೂರು ಮನೆಗಳಿದ್ದು, ಇಲ್ಲಿ ಭೋವಿ ಸಮುದಾಯಕ್ಕೆ ಸೇರಿದ ಸುಮಾರು 20 ಮನೆಗಳವರು ಪ್ರತಿ ಭಾರಿಯೂ ಈ ರೀತಿಯ ಘಟನೆ ಮರುಕಳಿಸುತ್ತಿದೆ. ಇಲ್ಲಿನ ಜಮೀನಿನ ವಿಚಾರಕ್ಕೆ ಸಂಬಂದಿಸಿದಂತೆ ಮಂಗಳವಾರ ಎರೆಡು ಕಡೆಯವರನ್ನು ಕರೆಸಿ ತೀರ್ಮಾನಿಸುವುದಕ್ಕೆ ತೀರ್ಮಾನಿಸಲಾಗಿತ್ತು. ಆದರೆ ರಾತ್ರಿ ಏಕಾಏಕಿ ಒಂದು ಗುಂಪಿನವರು ಈ ರೀತಿಯ ಘಟನೆಗೆ ಕಾರಣವಾಗಿರುವುದು ಸರಿಯಲ್ಲ. ಇವರು ಗ್ರಾಮದಲ್ಲಿ ಸಾಮರಸ್ಯವನ್ನು ಕದಡುತ್ತಿರುವುದರಿಂದ ಈ ಎರೆಡು ಗುಂಪುಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದರು. ಘಟನೆ ನಡೆದ ಸ್ಥಳಕ್ಕೆ ಬೇಲೂರು ಪಿಎಸ್‍ಐ ಬಾಲು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಧ್ವಂಸಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin