ಹಳ್ಳದಕೇರಿ ಶಾಲೆಯಲ್ಲಿ ಇಂಧನ ಸಂರಕ್ಷಣಾ ದಿನಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu

ನಂಜನಗೂಡು ಫೆ 14 : ನಗರದ ಹಳ್ಳದಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಗರದ ಚೌಡೇಶ್ವರಿ ಗ್ಯಾಸ್ ಏಜಸ್ಸಿ ಮತ್ತು ನಂಜುಂಡೇಶ್ವರ ಗ್ಯಾಸ್ ಏಜಸ್ಸಿ ಸಹಯೋಗದೊಂದಿಗೆ ಅಡಿಗೆ ಅನಿಲ ಸಂರಕ್ಷಣೆ ಮತ್ತು ಸುರಕ್ಷತೆ ಬಗ್ಗೆ ಚೌಡೇಶ್ವರಿ ಗ್ಯಾಸ್ ಏಜಸ್ಸಿ ಮಾಲೀಕರಾದ ಶ್ರೀ ಗೋವರ್ಧನ್ ರವರು ಮಕ್ಕಳಿಗೆ ಹಿಂದಿನಕಾಲದಲ್ಲಿ ಅಡುಗೆ ಮಾಡಲು ಬಳಕೆ ಮಾಡುತ್ತಿದ್ದ ವಿಧಾನಕ್ಕೂ ಈಗ ಬಳಕೆ ಮಾಡುವ ವಿಧಾನದ ಬಗ್ಗೆ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಇತ್ತೀಚಿನ ದಿನಗಳಲ್ಲಿ ಅಡಿಗೆ ಅನಿಲವು ಸಾಮಾನ್ಯ ಬಡವರ್ಗದವರಿಗೂ ದೊರೆಯಬೇಕು ಎಂದು ಸರ್ಕಾರ ಉಚಿತವಾಗಿ ಅಡಿಗೆ ಸಿಲಿಂಡರ್ ಹಾಗೂ ಸ್ಟೌವ್ ನೀಡುತ್ತಿರುವುದನ್ನು ತಾವು ನೋಡಿರಬಹುದು .ತಮ್ಮ ಮನೆಯಲ್ಲಿ ತಮ್ಮ ಪೋಷಕರು ಬಳಸುವ ಸಿಲಿಂಡರ್ ಬಳಕೆ ಬಗ್ಗೆ ಜಾಗೃತಿಯನ್ನು ತಾವು ಚಿಕ್ಕವಯಸ್ಸಿನಲ್ಲಿ ತಿಳಿಸದರೆ ತಮ್ಮ ತಾಯಿ ಅಥವಾ ಕುಟುಂಬದವರಿಗೆ ಬಳಕೆ ವಿಧಾನವನ್ನು ತಿಳಿಸಬಹುದು ಇದು ಅತಿ ಉಪಯೋಗವಾದರೂ ಅದರ ಬಳಕೆ ಬಗ್ಗೆ ಜಾಗೃತಿಯನ್ನು ವಹಿಸಬೇಕು.

ಮನೆಯಲ್ಲಿ ಅನಿಲ ಸಿಲಿಂಡರ್ ಬಳಸುವ ಸ್ಥಳದಲ್ಲಿ ಉತ್ತಮವಾದ ಗಾಳಿ, ಬೆಳಕು. ಇರುವ ಕಡೆ ಅಡಿಗೆ ಸ್ಟೌವ್ ಇಟ್ಟಿಕೊಳ್ಳಬೇಕು ಸುರಕ್ಷತೆಯನ್ನು ತಿಳಿದು ಕೊಳ್ಳಬೇಕು. ಇಲ್ಲವಾದರೆ ಅನಿಲ ಸೋರಿಕೆಯಿಂದ ಅತ್ಯಂತ ಹಾನಿಕಾರ ಅನಾಹುತಗಳು ಉಂಟಾಗುವುದುನಂಜನಗೂಡಿನ ಚಾಮಲಾಪುರದಹುಂಡಿ ಹಾಗೂ ರಾಮಸ್ವಾಮಿ ಕಾಲೋನಿಯಲ್ಲಿ ಅನಿಲದ ದುರಂತಗಳನ್ನು ಉದಾಹರಣೆಯಾಗಿ ತಿಳಿಸಿದರು. ಅನಿಲ ಸಿಲಿಂಡರ್ ನಲ್ಲಿ ಅನಿಲ ಸೋರಿಕೆ ಉಂಟಾದರೆ ಮುಂಜಾಗ್ರತೆ  ವಹಿಸಿ ಕೈಗೊಳ್ಳುವ ಕ್ರಮಗಳನ್ನು ವಿವರಿಸಿದರು. ಅನಿಲ ಸಿಲಿಂಡರ್‍ಗೆ ಬಳಸುವ ಪೈಪ್ ಗಳನ್ನು ಆಗಾಗ ಬದಲಿಸಿ ಅನಾಶಹುತಗಳ ತಪ್ಪಿಸ ಬಹುದೆಂದು ಸಹತಿಳಿಸಿದರು. ಮನೆಯಲ್ಲಿ ಪೋಷಕರು ತಮ್ಮ ಅಡುಗೆ ಮಾಡಿದ ನಂತರ ಸಿಲಿಂಡರ್‍ನ ರೆಗ್ಯೂಲೇಟರ್ ಆಫ್ ಮಾಡಬೇಕು ಮತ್ತು ಅಡುಗೆ ಮಾಡುವ ಮುಂಚೆ ಅನಿಲವನ್ನು ಅನಾವಶ್ಯಕವಾಗಿ ಉರಿಸಬಾರದೆಂದು ಸಹ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ನಂಜುಂಡೇಶ್ವರ ಗ್ಯಾಸ್ ಏಜಸ್ಸಿ ಮಾಲೀಕರಾದ ಸುರೇಶ, ಶಾಲೆಯಮುಖ್ಯಶಿಕ್ಷಕರಾದ ಶ್ರೀ ಬಸವರಾಜು, ಸಹಶಿಕ್ಷಕರಾದ ಶಿವಶಂಕರ್.ಟಿ.ಕೆ , ಜಯಂತಿ, ತಾರಾ. ಸತೀಶ್.ಎಸ್.ಸ್ವಾಗತಿಸಿದರೆ. ಶಿವಶಂಕರ್ ವಂದಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin