ಹಸುಗೂಸನ್ನು ಕೆರೆ ಏರಿ ಮೇಲೆ ಬಿಟ್ಟು ಹೋದ ನಿರ್ದಯಿ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

mysuru
ಮೈಸೂರು, ಫೆ.14- ತಾನೇ ಹೆತ್ತ ಹಸುಗೂಸನ್ನು ನಿರ್ದಯಿ ತಾಯಿಯೊಬ್ಬಳು ಕೆರೆ ಏರಿ ಮೇಲೆ ಮಲಗಿಸಿ ಕಣ್ಮರೆಯಾಗಿರುವ ಘಟನೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಕೆರೆ ಏರಿ ಮೇಲೆ ರಾತ್ರಿ 11.30ರ ವೇಳೆಯಲ್ಲಿ ಗಸ್ತಿನಲ್ಲಿದ್ದ ಸಬ್‍ಇನ್ಸ್‍ಪೆಕ್ಟರ್ ಆನಂದ್ ಅವರು ಹೋಗುವಾಗ ಮಗು ಅಳುವ ಶಬ್ದ ಕೇಳಿಬಂದಿದೆ.

ತಕ್ಷಣವೇ ಸಬ್‍ಇನ್ಸ್‍ಪೆಕ್ಟರ್ ಶಬ್ದವನ್ನು ಆಲಿಸಿ ಹತ್ತಿರ ಹೋಗಿ ನೋಡಿದಾಗ ತಾನೇ ಹುಟ್ಟಿದ ನವಜಾತ ಶಿಶುವೊಂದನ್ನು ಬಟ್ಟೆಯಲ್ಲಿ ಸುತ್ತಿ ಇಟ್ಟಿರುವುದು ಕಂಡುಬಂದಿದೆ. ತಕ್ಷಣವೇ ಇನ್ಸ್‍ಪೆಕ್ಟರ್ ಮಗುವನ್ನು ಎತ್ತಿಕೊಂಡು ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಮಗುವಿನ ಕಾಲಿನಲ್ಲಿ ಬ್ಯಾಂಡೇಜ್ ಕೂಡ ತೆಗೆಯದೆ ಇದ್ದು, ಆಗ ತಾನೆ ಹುಟ್ಟಿದ ಹಸುಗೂಸನ್ನು ತಂದು ಇಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮಗುವಿಗೆ ಈಗ ಚಿಕಿತ್ಸೆ ನೀಡಲಾಗಿದ್ದು, ಮಗು ಆರೋಗ್ಯದಿಂದ ಇದೆ ಎಂದು ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin