ಹಾಡಹಗಲೇ ದರೋಡೆ, ಸರಗಳವು : ಆತಂಕದಲ್ಲಿ ಬೆಂಗಳೂರಿಗರು

ಈ ಸುದ್ದಿಯನ್ನು ಶೇರ್ ಮಾಡಿ

Snatchers

ಬೆಂಗಳೂರು, ಅ.26- ಹಾಡಹಗಲೇ ದರೋಡೆಕೋರರ ಹಾಗೂ ಸರಗಳ್ಳರ ಹಾವಳಿ ಹೆಚ್ಚಾಗಿರುವುದರಿಂದ ನಗರದ ನಾಗರಿಕರು ಆತಂಕ್ಕೊಳಗಾಗಿದ್ದಾರೆ.ನಗರದಲ್ಲಿ ಒಂದಲ್ಲಾ ಒಂದು ಕಡೆ ಪ್ರತಿನಿತ್ಯ ಸರಗಳ್ಳತನ ನಡೆಯುತ್ತಲೇ ಇದ್ದು, ಮಹಿಳೆಯರು ಹೊರ ಬರಲು ಅಂಜುವ ಸ್ಥಿತಿ ನಿರ್ಮಾಣವಾಗಿದೆ.ಬೆಳಗ್ಗೆ ಹಾಲು, ತರಕಾರಿ ತರಲು, ಮನೆ ಮುಂದೆ ರಂಗೋಲೆ ಹಾಕಲು ಮಹಿಳೆಯರು ಹೊರ ಬರುವುದನ್ನೇ ಕಾದಿದ್ದು, ಬೈಕ್‍ನಲ್ಲಿ ಬರುವ ಸರಗಳ್ಳರು ಅವರುಗಳ ಸರಗಳನ್ನು ಅಪಹರಿಸಿ ಪರಾರಿಯಾಗುತ್ತಿರುವುದು ಪ್ರತೀ ದಿನ ನಡೆಯುತ್ತಲೇ ಇದೆ.
ಅಲ್ಲದೆ, ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವೇಳೆ, ಕರೆತರುವ ವೇಳೆ, ಕಚೇರಿಗೆ ಹೋಗುವ ಹಾಗೂ ಬರುವ ವೇಳೆ ಮಹಿಳೆಯರನ್ನು ಚೋರರು ಬೈಕ್‍ನಲ್ಲಿ ಹಿಂಬಾಲಿಸಿ ಸರ ಎಗರಿಸುತ್ತಿದ್ದಾರೆ. ಮತ್ತೊಂದಡೆ ಹಣವನ್ನು ಹೊರಗೆ ತೆಗೆದುಕೊಂಡು ಹೋಗುವುದೇ ಕಷ್ಟವಾಗಿದೆ. ಯಾರು, ಯಾವಾಗ, ಎಲ್ಲಿ ನಮ್ಮನ್ನು ಹಿಂಬಾಲಿಸಿ ಹಣ ಕಸಿಯುತ್ತಾರೋ ಎಂಬ ಭೀತಿಯಲ್ಲಿ ಓಡಾಡುವ ಸ್ಥಿತಿ ರಾಜಧಾನಿ ಯಲ್ಲಿ ನಿರ್ಮಾಣವಾಗಿದೆ.
ಬ್ಯಾಂಕ್‍ಗೆ ಪಾವತಿಸಲು ಹಣ ತೆಗೆದುಕೊಂಡು ಬರುವ, ಹಣ ಡ್ರಾ ಮಾಡಿಕೊಂಡು ಹೋಗುವ ವ್ಯಕ್ತಿಗಳನ್ನು ಹಿಂಬಾಲಿಸಿ ಹಣ ದರೋಡೆ ಮಾಡುತ್ತಿರುವುದು ನಗರದಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ವ್ಯಾಪಾರ, ವ್ಯವಹಾರ ನಡೆಸುವವರು ಹಾಗೂ ಮತ್ತಿತರ ಕೆಲಸಗಳಿಗೆ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ನಿಗದಿತ ಸ್ಥಳಕ್ಕೆ ತಲುಪುವುದೇ ಕಷ್ಟವಾಗಿದೆ. ಮೊನ್ನೆ ಹಾಡಹಗಲೇ ಯಶವಂತಪುರದಲ್ಲಿ 16 ಲಕ್ಷ ಹಣ ದರೊಡೆ ಮಾಡಿರುವುದಲ್ಲದೆ, ನಿನ್ನೆ ವಿಜಯನಗರದ ಆರ್‍ಪಿಸಿ ಲೇಔಟ್‍ನಲ್ಲಿ 6ಲಕ್ಷ ಹಣ ದರೋಡೆಕೋರರ ಪಾಲಾಗಿದೆ.ದರೋಡೆಕೋರರು ಹಾಡಹಗಲೇ ರಾಜಾರೋಷವಾಗಿ ಬೈಕ್‍ಗಳಲ್ಲಿ ಸುತ್ತಾಡುತ್ತಾ ಹಣ ದರೋಡೆ ಮಾಡುತ್ತಿರುವ ಪ್ರಕರಣಗಳನ್ನು ಮಟ್ಟ ಹಾಕುವಲ್ಲಿ ನಗರ ಪೆÇಲೀಸರು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬ್ಯಾಂಕುಗಳ ಮುಂದೆ ಓಡಾಡುತ್ತಾ ಕಾರು ಹಾಗೂ ಬೈಕ್‍ಗಳಲ್ಲಿ ಬರುವ ವ್ಯಕ್ತಿಗಳ ಚಲನವಲನ ಗಮನಿಸಿ ಅವರು ಹಣ ಡ್ರಾ ಮಾಡಿಕೊಂಡು ಹೊರ ಬರುತ್ತಿದ್ದಂತೆ ಅವರನ್ನು ಹಿಂಬಾಲಿಸಿ ಹಣ ದರೋಡೆ ಮಾಡುತ್ತಿರುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದೆ.ನಿತ್ಯ ಒಂದಲ್ಲಾ ಒಂದು ಕಡೆ ಸರಗಳ್ಳತನ, ಹಣ ದರೋಡೆ ಪ್ರಕರಣಗಳು ನಡೆಯುತ್ತಲೇ ಇದ್ದು, ಇನ್ನಾದರೂ ಪೊಲೀಸರು ಹೆಚ್ಚಿನ ಗಸ್ತು ನಡೆಸುವ ಹಾಗೂ ದರೋಡೆಕೋರರನ್ನು ಬಂಧಿಸುವ ಮೂಲಕ ಇಂತಹ ಪ್ರಕರಣಗಳನ್ನು ತಡೆಗಟ್ಟಬೇಕಾಗಿದೆ.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin