ಹಂಡಿಭಾಗ್ ಕುರಿತ ನನ್ನ ಹೇಳಿಕೆಯನ್ನ ವಾಪಸು ಪಡೆದುಕೊಳ್ಳುತ್ತೇನೆ : ಬಾಲಕೃಷ್ಣ

ಈ ಸುದ್ದಿಯನ್ನು ಶೇರ್ ಮಾಡಿ

Jallappa

ಬೆಂಗಳೂರು. ಆ.24 : ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ ಬಗ್ಗೆ ಸಾರ್ವಜನಿಕವಾಗಿ ನನ್ನ ನನ್ನ ಹೇಳಿಕೆಯನ್ನ ವಾಪಸು ಪಡೆದುಕೊಳ್ಳುತ್ತೇನೆ ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ.   ಸುದ್ದಿಗೋಷ್ಠಿ.ಯಲ್ಲಿ ಮಾತನಾಡಿದ ಅವರು ನಮ್ಮ ಕಡೆಗಳಲ್ಲಿ ಆಡುವಂತಹ ಪದವನ್ನು ಬಳಸಿದ್ದೇನೆ, ಆದರೆ ಇದರಿಂದ ಅವರ ತಂದೆ ಪ್ರತಿಕ್ರಿಯೆ ನೀಡಿರುವುದನ್ನು ನೋಡಿ ನನಗೂ ನೋವಾಗಿದೆ, ಆದ್ದರಿಂದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ತಿಳಿಸಿದರು.  ಮಾನವೀಯತೆ ಮೇಲೆ ಅವ್ರ ಕುಟುಂಬಕ್ಕೆ ಪರಿಹಾರ ನೀಡಿದ್ದೇವೆ. ನಿನ್ನೆ ಆ ಹೇಳಿಕೆ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.  ಅವ್ರ ತಂದೆ ಹೇಳಿಕೆ ನೀಡಿದ್ದ ಬಗ್ಗೆ ಪಾಪ ಪ್ರಜ್ಞೆ ಕಾಡಿತ್ತು. ಆಡು ಭಾಷೆಯಲ್ಲಿ ನಾನು ಹೇಳಿದ್ದೆ, ಯಾರಿಗೂ ನೋವು ಉಂಟು ಮಾಡುವ ಬಗ್ಗೆ ನಾನು ಆ ರೀತಿ ಹೇಳಿಲ್ಲ..ಅವ್ರ ತಂದೆ ಹೇಳಿಕೆಯಿಂದ ನನಗೆ ತುಂಬಾ ನೋವಾಗಿದೆ.

ಹೀಅಗಾಗಿ,ಅವ್ರ ಕುಟುಂಬಕ್ಕೆ ಮತ್ತು ಯಾರಿಗಾದರೂ ನನ್ನ ಹೇಳಿಕೆಯಿಂದ ನೋವುಗಿದ್ದಾರೆ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಎಂದು ತಿಳಿಸಿದ್ದಾರೆ.   ಬೆಂಗಳೂರಿನ ಯು.ಬಿ.ಸಿಟಿ ಬಳಿ ಇರುವ ಜಮ್ಮೀರ್ ಅಹ್ಮದ್ ಪ್ಲಾಟ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಬಾಲಕೃಷ್ಣ ಜೊತೆ ಚೆಲುವರಾಯಸ್ವಾಮಿ, ಜಮೀರ್ ಅಹ್ಮದ್ ಉಪಸ್ಥಿತರಿದ್ದರು.

ಮೈತ್ರಿ ಮುಂದುವರೆಯುವ ವಿಶ್ವಾಸವಿದೆ : ಜಮ್ಮೀರ್ ಹೇಳಿಕೆ

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆ ಕಾಂಗ್ರೆಸ್ ನೊಂದಿಗೆ ಐದು ವರ್ಷ ಮೈತ್ರಿ ಮಾಡುವ ಬಗ್ಗೆ ದೇವೇಗೌಡರು ಭರವಸೆ ಕೊಟ್ಟಿದ್ದರು. ಹೀಗಾಗಿ ಮೈತ್ರಿ ಮುಂದುವೆರೆಸುತ್ತಾರೆ ಅನ್ನೋ ವಿಶ್ವಾಸ ನಮ್ಮಗಿದೆ. ಎಂದು ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ. ಮಾತು ತಪ್ಪಿದ್ರೆ ಯಡಿಯೂರಪ್ಪ- ಕುಮಾರಸ್ವಾಮಿ ಸರ್ಕಾರದಲ್ಲಿ ಏನಾಯ್ತು ಅಂತ ಗೊತ್ತಿದೆ..ಯಡಿಯೂರಪ್ಪ ಮೈತ್ರಿ ಬೇಡ ಅಂತ ಹೇಳಿದ್ದಾರೆ..ಹೀಗಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸುತ್ತಾರೆ ಅನ್ನೋ ವಿಶ್ವಾಸ ನಮ್ಮಗೆ ಇದೆ.. ಜೆಡಿಎಸ್ ನ ಒಬ್ಬರೋ ಇಬ್ಬರು ಬಿಬಿಎಂಪಿ ಸದಸ್ಯ ಹೊರತುಪಡಿಸಿದ್ರೆ ಎಲ್ಲರು ಒಟ್ಟಿಗೆ ಇದ್ದಾರೆ.. ನೀವು ಹೇಳಿದಂತೆ ನಾವು ಕೇಳುತ್ತೇವೆ ಎಂದು ಹೇಳಿದ್ದಾರೆ.. ಎಂದೂ ಕೂಡ ತಿಳಿಸಿದ್ದಾರೆ.  ದೇವೇಗೌಡರು ನಮ್ಮನ್ನು ಕರೆದರೆ ಈ ಬಗ್ಗೆ ಚರ್ಚಿಸಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.

ಚೆಲುವರಾಯಸ್ವಾಮಿ ಮಾತನಾಡಿ ನಮ್ಮನ್ನ ಪಕ್ಷದಲ್ಲಿ ಉಳಿಸೋಕೊಳ್ಳೋದು ಬಿಡೋದು ಅವ್ರಿಗೆ ಬಿಟ್ಟ ತೀರ್ಮಾನ… ನಮ್ಮನ್ನ ಪಕ್ಷದಲ್ಲಿ ಉಳಿಸಿಕೊಂಡ್ರು,ಹೊರಗೆಕಳುಹಿಸಿದ್ರೆ ನಮಗೆ ಏನು ಸಮಸ್ಯೆ ಇಲ್ಲ..  ನಮ್ಮ ಪಕ್ಷದಿಂದ ಹೊರಹಾಕೋದಕ್ಕೆ ದೇವೇಗೌಡ ಆತುರದಲ್ಲಿದ್ದಾರೆ… ನಾವೇನು ಅವ್ರಿಗೆ ಒತ್ತಾಯ ಮಾಡೋದಿಲ್ಲ… ಅವ್ರ ತೀರ್ಮಾನಕ್ಕಾಗಿ ನಾವೆಲ್ಲರೂ ಕಾಯುತ್ತಿದ್ದೇವೆ.. ಎಂದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin