ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ರಾಜಕೀಯ ಬದಲಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

Manohar-Tahsheeldar-01

ಹಾವೇರಿ, ಏ.24- ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ರಾಜಕೀಯ ಬದಲಾವಣೆಗಳು ನಡೆದಿವೆ. ಹಾಲಿ ಶಾಸಕ, ಮಾಜಿ ಸಚಿವ ಮನೋಹರ್ ತಹಸೀಲ್ದಾರ್ ಅವರ ಪುತ್ರ ರಾಘವೇಂದ್ರ ತಹಸೀಲ್ದಾರ್ ಅವರನ್ನು ಜೆಡಿಎಸ್‍ಗೆ ಸೆಳೆಯುವ ಪ್ರಯತ್ನ ನಡೆದಿದೆ. ಕ್ಷೇತ್ರದಲ್ಲಿ ಜೆಡಿಎಸ್ ಬಲಪಡಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ವಿವಿಧ ತಂತ್ರಗಾರಿಕೆಯನ್ನು ನಡೆಸುತ್ತಿದೆ. ಬೆಳಗ್ಗೆಯಿಂದ ಮನೋಹರ್ ತಹಸೀಲ್ದಾರ್ ನಿವಾಸದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಜಮಾಯಿಸಿದ್ದಾರೆ. ಮನೋಹರ್ ತಹಸೀಲ್ದಾರ್ ಕುಟುಂಬದಲ್ಲಿ ಒಬ್ಬರು ಬಹುತೇಕ ಜೆಡಿಎಸ್ ಸೇರುವುದು ಖಚಿತವಾಗಿದೆ ಎನ್ನಲಾಗಿದೆ. ಮನೋಹರ್ ತಹಸೀಲ್ದಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕುಮಾರಸ್ವಾಮಿ, ತಾವು ಅಥವಾ ತಮ್ಮ ಪುತ್ರ ಜೆಡಿಎಸ್ ಸೇರುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮನೋಹರ್ ಕುಟುಂಬ ಜೆಡಿಎಸ್‍ನತ್ತ ಮುಖ ಮಾಡಿದೆ. ಮಧ್ಯಾಹ್ನದ ವೇಳೆಗೆ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ರಾಜಕೀಯ ಬದಲಾವಣೆಗಳಾದರೂ ಆಶ್ಚರ್ಯವಿಲ್ಲ.

Facebook Comments

Sri Raghav

Admin