ಹಾರರ್ ವಿಡಿಯೋ ..! ಫ್ರೆಂಚ್ ಜಿಮ್ನಾಸ್ಟಿಕ್ ಪಟು ಕಾಲು ಮೂಳೆ ಮುರಿತ

ಈ ಸುದ್ದಿಯನ್ನು ಶೇರ್ ಮಾಡಿ


ರಿಯೊ  ಡಿ ಜೈನೆರಿಯೊ, ಆ.7-   2016ರ ರಿಯೊ ಒಲಿಂಪಿಕ್ಸ್‍ನ ಆರಂಭಿಕ ದಿನದ ಜಿಮ್ನಾಸ್ಟಿಕ್ ವಿಭಾಗದಲ್ಲಿ ದುರಂತ ಸಂಭವಿಸಿದ್ದು ಎಲ್ಲರಲ್ಲೂ ಆತಂಕ ಮೂಡಿಸಿದೆ.   ನಿನ್ನೆ  ನಡೆದ  ಜಿಮ್ನಾಸ್ಟಿಕ್‍ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಫ್ರೆಂಚ್‍ನ ಜಿಮ್ನಾಸ್ಟಿಕ್ ಸಮಿರ್ ಆಟಿ ಅವರು ಪ್ರದರ್ಶನ ತೋರುವ ಸಮಯದಲ್ಲಿ ಆಯ ತಪ್ಪಿ  ಬಿದ್ದ ಪರಿಣಾಮದಿಂದ ಅವರ ಎಡಗಾಲಿನ ಮೊಣಕಾಲಿನ ಕೆಳಗಿನ  ಮೂಳೆಯು ಮುರಿದಿದೆ.  ಪ್ರದರ್ಶನದ ವೇಳೆ ಪಟಾಕಿಗಳ ಭಾರಿ ಸದ್ದಿನಿಂದ ಈ ದುರಂತ ನಡೆದಿದೆ ಎಂದು ತಿಳಿದು ಬಂದಿದೆ.  ಸಮೀರ್ ಆಟಿ ಅವರು 2010ರಲ್ಲಿ ನಡೆದ  ಇರೋಪಿಯನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ , ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು.   ಈ ಬಾರಿ ರಿಯೊ ಒಲಿಂಪಿಕ್ಸ್‍ನಲ್ಲೂ ಕೂಡ ಅದ್ಭುತ ಪ್ರದರ್ಶನ ತೋರುವ ಮೂಲಕ ಪದಕಗಳ ಬೇಟೆಗೆ ಮುಂದಾಗಿದ್ದ ಸಮೀರ್‍ಗೆ ಈ  ಮೊಣಕಾಲಿನ  ಕೆಳಗಿನ ಮೂಳೆ  ಮುರಿದಿರುವುದರಿಂದ ಅವರಿಗೆ  ಹಿನ್ನೆಡೆ ಉಂಟಾಗಿದೆ.

ರಿಯೊ  ಒಲಿಂಪಿಕ್ಸ್‍ನಲ್ಲಿ  ಸಮೀರ್ ಅವರು ಹಾರಿಜಂಟಲ್ ಬಾರ್ಸ್ , ಪ್ಯಾರಲಾಲ್ ಬಾರ್ಸ್ , ದಿ ರಿಂಗ್ಸ್ , ದಿ ಪೊಮೆಲ್ ಹಾರ್ಸ್ , ದಿ ಪ್ಲೋರ್ ಎಕ್ಸರ್‍ಸೆಜ್‍ನ ವೈಯಕ್ತಿಕ ಹಾಗೂ  ಟೀಂ ವಿಭಾಗದಲ್ಲೂ ಕೂಡ ಅಲ್‍ರೌಂಡರ್ ಪ್ರದರ್ಶನದ ಗುಂಪಿನಲ್ಲಿ ಸಮೀರ್ ಸ್ಥಾನ ಪಡೆದಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin