ಹಾಲಿವುಡ್ ಸ್ಟೈಲಲ್ಲಿ ಗ್ರೇಟ್ ರಾಬರಿ..! : ರೈಲಿನಲ್ಲಿ ಸಾಗಿಸುತ್ತಿದ್ದ 340 ಕೋಟಿ ಹಣ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

Rob

ಚೆನ್ನೈ, ಆ. 09 :  ಸಿನೆಮಾ ಮಾದರಿಯಲ್ಲಿ ಮಾದರಿಯಲ್ಲಿ ನಡೆದ ರೈಲು ದರೋಡೆಯಲ್ಲಿ ಬರೊಬ್ಬರಿ 300 ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ಡೋಚಲಾಗಿದೆ. ರೈಲಿನಲ್ಲಿ ಸಾಗಿಸುತ್ತಿದ್ದ ಕೋಟ್ಯಂತರ ಹಣವನ್ನು ರೈಲಿನ ಮೇಲಿನಿಂದ ರಂಧ್ರ ಕೊರೆದು  ಲೂಟಿ ಮಾಡಿದ ಘಟನೆ ಚೆನ್ನೈನಲ್ಲಿ  ನಡೆದಿದೆ. ಆದರೆ ಈ ರಾಬರಿಯ ವಿಷಯ ಬೆಳಕಿಗೆ ಬಂದಿದ್ದು ಮಂಗಳವಾರ 11 ಗಂಟೆಗೆ.
ರೈಲು ಚೆನ್ನೈಗೆ ಬೆಳಗಿನ ಜಾವ 4 ಗಂಟೆಗೆ ತಲುಪಿದರೂ ಲೂಟಿಯಾಗಿದ್ದು ಗೊತ್ತಾಗಿರಲಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಬಂದು 11 ಗಂಟೆಗೆ ಪರಿಶೀಲಿಸಿದಾಗ ಲೂಟಿಯಾಗಿರುವುದು ತಿಳಿದುಬಂದು ದಂಗುಬಡಿದಿದ್ದಾರೆ.  ಲೂಟಿಯಾಗಿದ್ದು ಸಣ್ಣ ಮೊತ್ತವಲ್ಲ. ಚೆನ್ನೈ ಎಕ್ಸೆ ಪ್ರೆಸ್ ರೈಲಿನಲ್ಲಿ ಎರಡು ಬೋಗಿಗಳಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 340 ಕೋಟಿ ರು. ಮೊತ್ತದ ಹಳೆ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸಾಗಿಸುತ್ತಿತ್ತು.

ಎಷ್ಟು ಗಂಟೆಗೆ ಹಣವನ್ನು ಲೂಟಿ ಮಾಡಲಾಗಿದೆ, ಎಷ್ಟು ಜನರಿಂದ ಮಾಲಾಗಿದೆ, ಯಾವ ಸ್ಥಳದಲ್ಲಿ ರಾಬರಿಯನ್ನು ನಡೆಸಲಾಗಿದೆ, ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಗಳು ಇರಲಿಲ್ಲವೆ ಅಥವಾ ಭದ್ರತಾ ಸಿಬ್ಬಂದಿಯ ಕೈವಾಡವೇ ಇರಬಹುದೆ… ಮುಂತಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.

 

Facebook Comments

Sri Raghav

Admin