ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆ
ಹನೂರು, ಆ.19- ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಪೂರೈಸಿ ಸಹಕಾರ ಸಂಘಗಳ ಅಭಿವೃದ್ದಿಗೆ ಸಹಕರಿಸುವ ಮೂಲಕ ಸಹಾಯಧನವನ್ನು ಪಡೆದುಕೊಳ್ಳಬೇಕು ಎಂದು ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಉಪವ್ಯವಸ್ಥಾಪಕ ಡಾ. ನಾಗಬಸವಣ್ಣ ತಿಳಿಸಿದರು.ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಜಿ.ಆರ್.ನಗರ ಮತ್ತು ಶಿರಗೋಡು ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ಕರೆಯಲಾಗಿದ್ದ 2015-16ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ರೈತರು ಮೊದ ಮೊದಲು ಕೃಷಿ ಜತೆ ಹೈನುಗಾರಿಕೆಯನ್ನು ಉಪಕಸುಬಾಗಿ ಮಾಡುತ್ತಿದ್ದರು. ಆದರೆ ಕೆಲ ವರ್ಷಗಳಿಂದ ಮಳೆರಾಯನ ಅವಕೃಪೆಯಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡು ಕಂಗೆಟ್ಟ ರೈತನಿಗೆ ಹೈನುಗಾರಿಕೆ ಆಸರೆಯಾಗಿದೆ. ಇದನ್ನೇ ಮುಖ್ಯ ಕಸುಬಾಗಿ ಅವಲಂಬಿಸಿಕೊಂಡ ರೈತರಿಗೆ ದಾರಿ ದೀಪವಾಗಿದೆ ಎಂದರುಆದರೆ ಪ್ರಸಕ್ತ ವರ್ಷದಲ್ಲಿ ಮುಂಗಾರು ಕ್ಷೀಣಿಸಿದ್ದು ಶೇ.10ರಷ್ಟು ಹಾಲು ಶೇಖರಣೆಯಲ್ಲಿ ಕುಸಿತ ಕಂಡ್ತಿದೆ. ಜಿಡ್ಡಿನಾಂಶದ ಆಧಾರ ಮೇಲೆ ಪ್ರತಿ ಲೀಟರ್ಗೆ ಹಣ ದೊರೆಯುತ್ತದೆ. ಜಿಡ್ಡಿನಾಂಶ ಕಡಿಮೆಯಾದಲ್ಲಿ ಅಂತಹ ಹಾಲಿನಲ್ಲಿ ಬೆಣ್ಣೆಬರುವುದಿಲ್ಲ. ಹಾಗಾಗಿ ಸರ್ಕಾರದಿಂದ ದೊರೆಯುವ ಸಬ್ಸಿಡಿ ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾ ವಿಸ್ತರಣಾಧಿಕಾರಿ ಡಿ. ಸೋಮಣ್ಣ ಮಾತನಾಡಿ, ಸಬ್ಸಿಡಿಯಲ್ಲಿ ಹಾಲು ಕರೆಯುವ ಯಂತ್ರ ಕಡ್ಡಿ ಕತ್ತರಿಸುವ ಯಂತ್ರ ಮತ್ತು ವಿಧವೆ ಮಹಿಳೆಯರಿಗೆ ಪಶುಸಂಗೋಪನೆ ಇಲಾಖೆಯಲ್ಲಿ ಹೈನುಗಾರಿಕೆ ಯೋಜನೆಯಡಿ ರಿಯಾಯಿತಿ ದರದಲ್ಲಿ ಹಸು ನೀಡುತ್ತಿದ್ದು ಇದರ ಪ್ರಯೋಜನೆ ಪಡೆಯುವಂತೆ ತಿಳಿಸಿದರು.ಅಧ್ಯಕ್ಷಕರಾದ ಪಳನಿಸ್ವಾಮಿ, ಆರ್.ನಾಗೇಗೌಡ ಮುಖ್ಯ ಕಾರ್ಯನಿರ್ವಹಕರಾದ ಎಂ.ವೇಲುಸ್ವಾಮಿ, ರಾಜೇಂದ್ರಕುಮಾರ್, ಹಾಲು ಪರೀಕ್ಷಕರಾದ ಕನಕರಾಜು, ಮೈಲುಸ್ವಾಮಿ ಸಹಕಾರ ಸಂಘಗಳ ನಿರ್ದೇಶಕರು ಹಾಜರಿದ್ದರು.
► Follow us on – Facebook / Twitter / Google+