ಹಾಲೋ.. ಇಲ್ಲಿ ಕೇಳಿ ಅನುಷ್ಕಾ ಶೆಟ್ಟಿ ಮದ್ವೆಯಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

anushka

ಹೈದರಾಬಾದ್ ಸೆ.25 : ‘ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡತಿ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಕುರಿತು ಹೊಸದೊಂದು ಸುದ್ದಿ ಬಂದಿದೆ. ಅನುಷ್ಕಾ ಮುಂದಿನ ವರ್ಷ ಸಪ್ತಪದಿ ತುಳಿಯಲ್ಲಿದ್ದಾರೆ’ ಎನ್ನುವ ಸುದ್ದಿ ಹರಿದಾಡುತ್ತಿದೆ. ತೆಲುಗು ಮತ್ತು ತಮಿಳು ಮಾಧ್ಯಮಗಳಲ್ಲಿ ಅನುಷ್ಕಾ ಮದುವೆ ಕುರಿತು ಹತ್ತಾರು ಸುದ್ದಿಗಳು ಪ್ರಕಟವಾಗುತ್ತಿವೆ. ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ಅವರು ಬಾಹುಬಲಿ-2 ಚಿತ್ರ ಬಿಡುಗಡೆಯಾದ ಬಳಿಕ ಖ್ಯಾತ ತೆಲುಗು ಸಿನಿಮಾ ನಿರ್ಮಾಪಕರೊಬ್ಬರನ್ನು ವರಿಸಲಿದ್ದಾರೆ ಎಂಬುದನ್ನು ಅನುಷ್ಕಾ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಅನುಷ್ಕಾ ಶೆಟ್ಟಿ ಮಾತ್ರ, ‘ನಾನು ಮದುವೆಯ ಬಗ್ಗೆ ಇನ್ನೂ ಯೋಚನೆಯನ್ನೇ ಮಾಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾಳೆ. ಇದನ್ನ ನಂಬ್ತೀರೋ, ಅಥವಾ ಜಸ್ಟ್ ‘ಗಾಸಿಪ್’ ಅಂತ ಮೂಗು ಮುರಿಯುತ್ತೀರೋ…ನಿಮಗೆ ಬಿಟ್ಟಿದ್ದು.

► Follow us on –  Facebook / Twitter  / Google+

Facebook Comments

Sri Raghav

Admin