ಹಾಸನಾಂಬೆ ದರ್ಶನಕ್ಕೆ ತೆರೆ : 13 ದಿನದಲ್ಲಿ 10 ಲಕ್ಷ ಭಕ್ತರ ದರ್ಶನ, 2 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

HasanambA

ಹಾಸನ,ನ.1- ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಪ್ರಸಿದ್ಧ ಹಾಸನಾಂಬೆ ದರ್ಶನ ಮುಕ್ತಾಯವಾಗಿದ್ದು ಇಂದು ಮಧ್ಯಾಹ್ನ 2.30ಕ್ಕೆ ಬಾಗಿಲು ಮುಚ್ಚಲಾಯಿತು. ರಾಜ್ಯ ಹಾಗೂ ದೇಶದ ವಿವಿಧೆಗಳಿಂದ ಆಗಮಿಸಿದ 10 ಲಕ್ಷಕ್ಕೂ ಹೆಚ್ಚಿನ ಭಕ್ತರು ಕರ್ನಾಟಕದ ವೈಷ್ಣೋ ದೇವಿಯ ದರ್ಶನ ಪಡೆದರು. ಕಳೆದ ಬಾರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದು, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳೆದ ವರ್ಷ 9 ದಿನ ಮಾತ್ರ ದರ್ಶನ ಭಾಗ್ಯ ದೊರೆತರೆ ಈ ಬಾರಿ 13 ದಿನ ಅವಕಾಶ ಮಾಡಿಕೊಡಲಾಗಿತ್ತು. 13 ದಿನದಲ್ಲಿ ಸುಮಾರು 2 ಕೋಟಿ ರೂ.ಗಳಿಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಶೀಘ್ರ ದರ್ಶನಕ್ಕೆ ವ್ಯಕ್ತಿಯೊಬ್ಬರಿಗೆ 300 ರೂ. ನಿಗದಿ ಮಾಡಲಾಗಿತ್ತು. ಆದರೂ ಸಹ ಹೆಚ್ಚಿನ ಭಕ್ತರು ಶೀಘ್ರ ದರ್ಶನ ವ್ಯವಸ್ಥೆಯಲ್ಲಿ ಹೋಗಿ ದರ್ಶನ ಪಡೆದರು.

ಈ ಬಾರಿ ಬಂದೋಬಸ್ತ್‍ನಲ್ಲಿ ಮಾಜಿ ಸೈನಿಕರು ಪಾಲ್ಗೊಂಡು ಗಮನ ಸೆಳೆದರು. ದೇವಾಲಯದ ಹೊರಾಂಗಣದಲ್ಲಿ ಮಾತ್ರ ಪೊಲೀಸರು, ಒಳಂಗಾಣದಲ್ಲಿ ಮಾಜಿ ಯೋಧರು ಕಾರ್ಯ ನಿರ್ವಹಿಸಿದರು. ಹಾಸನಾಂಬೆಯ ದರ್ಶನ ಪಡೆದ ಗಣ್ಯರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಗೃಹ ಸಚಿವ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಕರಂದ್ಲಾಜೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಸಿ.ಟಿ.ರವಿ, ನಟ ಶಿರಾಜ್‍ಕುಮಾರ್ ಮತ್ತು ಅವರ ಪತ್ನಿ ಗೀತಾ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಮತ್ತು ಕುಟುಂಬದವರು ಪ್ರಮುಖರು.

► Follow us on –  Facebook / Twitter  / Google+

Facebook Comments

Sri Raghav

Admin