ಹಾಸನಾಂಬೆ ದೇವಾಲಯದಲ್ಲಿ ಕಳ್ಳತನಕ್ಕೆ ವಿಫಲ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Hasanambe--Temple

ಹಾಸನ, ಏ.2- ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರೀ ಹಾಸನಾಂಬ ದೇವಾಲಯದ ಬೀಗ ಒಡೆದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ. ಕಳೆದ ರಾತ್ರಿ ದರೋಡೆಕೋರರು ದೇವಾಲಯದ ಮುಖ್ಯ ದ್ವಾರದ ಬೀಗ ಒಡೆದಿದ್ದು , ಒಳ ಹೋಗಿದ್ದು ಏನೂ ಸಿಗದಿದ್ದಾಗ ಖಾಲಿ ಕೈಯಲ್ಲಿ ಹಿಂದಿರುಗಿದ್ದಾರೆ. ವರ್ಷಕ್ಕೊಮ್ಮೆ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಯಾವುದೇ ಆಭರಣಗಳು ಸಹ ದೇವಾಲಯದಲ್ಲಿ ಇರುವುದಿಲ್ಲ. ಹಾಗಾಗಿ ಕಳ್ಳರಿಗೂ ಏನೂ ದೊರೆತಿಲ್ಲ.

ಇಂದು ಬೆಳಗ್ಗೆ ಸ್ಥಳೀಯರು ದೇವಾಲಯದ ಬಾಗಿಲು ತೆರೆದಿರುವುದನ್ನು ಗಮನಿಸಿ ಆತಂಕಕ್ಕೀಡಾಗಿದ್ದಾರೆ. ಕೂಡಲೇ ಜಾಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜಾಲೀಸರು ಶ್ವಾನ ದಳ ಪರಿಶೀಲನೆ ನಡೆಸಿದ್ದು , ದೇವಾಲಯ ಹಾಗೂ ದೇವಾಲಯದ ಸುತ್ತಮುತ್ತ ಸಿಸಿ ಕ್ಯಾಮೆರಾಗಳಿದ್ದು , ಬೀಗ ಒಡೆದಿರುವ ದೃಶ್ಯ ಸೆರೆಯಾಗಿ ಜಾಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin