ಹಾಸನಾಂಬೆ ವಿಶೇಷ ದರ್ಶನದ ಟಿಕೆಟ್ 250ರೂ ನಿಂದ 300 ರೂ.ಗೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Hasanabha

ಹಾಸನ, ಅ.19-ಹಾಸನಾಂಬ ಜಾತ್ರೆ ಸಂದರ್ಭದಲ್ಲಿ ಪ್ರತಿಯೊಂದು ಇಲಾಖಾ ಅಧಿಕಾರಿ, ಸಿಬ್ಬಂದಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿ ಉತ್ಸವ ನಡೆಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವಿ. ಚೈತ್ರಾ ತಿಳಿಸಿದ್ದಾರೆ.ಜಾತ್ರೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಲೋಪಗಳಿಲ್ಲದಂತೆ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಸಂಘಟಿಸಬೇಕಿದೆ. ಸಾರ್ವಜನಿಕರಿಗೆ ಸುಗಮವಾಗಿ ಹಾಸನಾಂಬೆ ದರ್ಶನಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಈ ಬಾರಿ ಭದ್ರತಾ ಕಾರ್ಯಕ್ಕೆ ಮಾಜಿ ಸೈನಿಕರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಸಾಮಾನ್ಯ ದರ್ಶನ, ಪಾಸ್ ವ್ಯವಸ್ಥೆ ಹಾಗೂ ವಿಶೇಷ ದರ್ಶನ ಮತ್ತು ಅತಿ ಗಣ್ಯರ ದರ್ಶನವೆಂಬ ನಾಲ್ಕು ರೀತಿಯ ದರ್ಶನ ವ್ಯವಸ್ಥೆ ಮಾಡಲಾಗುತ್ತಿದೆ. ದಿನದ ಪಾಸ್‍ಗಳ ದಿನಾಂಕ ನಮೂದು ಮಾಡಿ ವಿತರಣೆ ಮಾಡಲಾಗುತ್ತದೆ.

ವಿಶೇಷ ದರ್ಶನದ ಟೆಕೆಟ್ ದರವನ್ನು 250ರೂ ನಿಂದ 300 ರೂ.ಗಳಿಗೆ ಏರಿಕೆ ಮಾಡಲಾಗಿದೆ. ವಿ.ಐ.ಪಿ.ಗಳು ಮೊದಲಿಗೆ ಅತಿಥಿ ಗೃಹಕ್ಕೆ ಆಗಮಿಸಿ ಅಲ್ಲಿಂದ ಆಯಾ ಅಧಿಕಾರಿ ಸಿಬ್ಬಂದಿಗಳ ಮೂಲಕ ಸ್ಥಳಕ್ಕೆ ಕರೆತರಲಾಗುವುದು ಎಂದು ವಿವರ ನೀಡಿದರು.ಉಪವಿಭಾಗಾಧಿಕಾರಿ ಹಾಗೂ ಹಾಸನಾಂಬ ದೇವಸ್ಥಾನ ಆಡಳಿತಾಧಿಕಾರಿ ಡಾ.ನಾಗರಾಜ್ ಮಾತನಾಡಿ, ಕರ್ತವ್ಯ ನಿರ್ವಹಿಸುವ ಅಧಿಕಾರಿ ಸಿಬ್ಬಂದಿಗಳು ಯಾರೂ ತಮ್ಮ ಸಂಬಂಧಿಕರನ್ನು ಹಾಗೇ ದರ್ಶನಕ್ಕೆ ಬಿಡಿಸುವಂತಿಲ್ಲ ಎಂದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಮಾತನಾಡಿ, ದೇವಸ್ಥಾನದ ಭದ್ರತಾ ವ್ಯವಸ್ಥೆಗಳ ಬಗ್ಗೆ ವಿವರಿಸಿದರು. ಸಿ.ಸಿ., ಟಿ.ವಿ. ವ್ಯವಸ್ಥೆ ಸಿಬ್ಬಂದಿ ನಿಯೋಜನೆ ಬಗ್ಗೆ ಮಾಹಿತಿ ನೀಡಿದರು.ಸಕಲೇಶಪುರ ಉಪವಿಭಾಗಾಧಿಕಾರಿ ಶಿವರಾಜ್, ತಹಸೀಲ್ದಾರ್ ಶಿವಶಂಕರ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin