ಹಿಂದು ಸಮಾಜದಲ್ಲಿ ಉತ್ಸವಗಳಿಗೆ ಕೊರತೆಯಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

17

ಅಮೀನಗಡ,ಡಿ.27- ದೇಶಕ್ಕಾಗಿ ದುಡಿಯುವವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಯಾರು ಮಾಡುತ್ತಿದ್ದು ಅಂತಹವರಲ್ಲಿ 56 ಇಂಚಿನ ಎದೆ ಯುಳ್ಳ ವ್ಯಕ್ತಿಯೂ ಇದ್ದಾರೆ ಎಂದು ಸಂಘದ ಬೆಳಗಾವಿ ವಿಭಾಗದ ಬೌದ್ಧಿಕ ಪ್ರಮಖ ರಾಮಚಂದ್ರ ಏಡಕೆ ತಿಳಿಸಿದರು. ಪಟ್ಟಣದಲ್ಲಿ ಆರೆಸ್ಸೆಸ್‍ನ ನಗರ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು. ಹಿಂದು ಸಮಾಜದಲ್ಲಿ ಉತ್ಸವಗಳಿಗೆ ಕೊರತೆಯಿಲ್ಲ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕ ಉತ್ಸವ ಕೇವಲ ಪಥಸಂಚಲನಕ್ಕೆ ಸೀಮಿತವಾಗಿಲ್ಲ. ಸಂಘದ ಕಾರ್ಯ ಚಟುವಟಿಕೆಗಳೇನು ಎಂಬುದನ್ನು ಸಮಾಜಕ್ಕೆ ತೋರ್ಪಡಿಸುವಂತಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೇನು? ಅದು ಯಾವ ಚಟುವಟಿಕೆಗಳನ್ನು ಮಾಡುತ್ತಿದೆ.

ಪ್ರತಿ ದಿನ ಒಂದು ತಾಸು ಸ್ವಯಂ ಸೇವಕರು ಏನು ಕಲಿಯುತ್ತಿದ್ದಾರೆ ಎಂಬುದನ್ನು ಸಮಾಜಕ್ಕೆ ಮನದಟ್ಟು ಮಾಡುವ ಕೆಲಸ ಮಾಡುತ್ತಿದೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರೆಡ್ ಮಾಡುವ ಮಿಲಟರಿ ಪಡೆಯಲ್ಲ, ಕರಾಟೆ ಕಲಿಸುವ ವ್ಯಾಯಾಮ ಶಾಲೆಯಲ್ಲ, ಯೋಗ ಕಲಿಸುವ ಯೋಗ ಶಾಲೆಯಲ್ಲ, ಸೂರ್ಯ ನಮಸ್ಕಾರ ಕಲಿಸುವ ಶಾಲೆಯಲ್ಲ, ಭಾಷಣ ಕರೆ ಕಲಿಸುವ ಪ್ರಯೋಗ ಶಾಲೆಯೂ ಅಲ್ಲ ಹೀಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೇವಲ ಒಂದು ಚಟುವಟಿಕೆಗೆ ಮಾತ್ರ ಸೀಮಿತವಾಗಿಲ್ಲ. ಮಾನವ ದೇಹದಲ್ಲಿನ ಕೈ, ಕಾಲು, ತಲೆ, ದೇಹ ಹೀಗೆ ಎಲ್ಲವೂ ಸೇರಿ ಕ್ರಿಯಾಶೀಲವಾಗಿ ಮನುಷ್ಯ ಎಂದೆನಿಸಿಕೊಳ್ಳುತ್ತಾನೋ ಹಾಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾನವ ಎಲ್ಲರೊಡನೆ ಹೊಂದಿಕೊಂಡು ನಾನು ಹಿಂದು ಎಂದು ಎದೆ ತಟ್ಟಿ ಹೇಳುತ್ತಾನೋ ಅಂತಹ ಕೆಲಸವನ್ನು ಆರ್.ಎಸ್.ಎಸ್. ಮಾಡುತ್ತದೆ ಎಂದರು.
ಇದುವರೆಗೂ ಸುಮ್ಮನಿದ್ದ ದೇಶದ ಸೈನಿಕರು ಇಂದು ತಮ್ಮ ತಾಕತ್ತು ತೋರಿಸುತ್ತಿದ್ದಾರೆ. ಹಿಂದೆ ಇಂತಹ ತಾಕತ್ ಇರಲಿಲ್ಲವೇ? ಇತ್ತು ಆದರೆ ಅಂದು ಅಟ್ಯಾಕ್ ಎಂದು ಹೇಳುವ 56 ಇಂಚಿನ ಸುತ್ತಳತೆ ಹೊಂದಿದ ನಾಯಕ ನಿರ್ಮಾಣವಾಗಿದ್ದಿಲ್ಲ. ಅಂಥ ನಾಯಕ ನಿರ್ಮಾಣವಾಗಿದ್ದು ನಮ್ಮ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ. ದೇಶ ಬ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅನೇಕರು ಪುಸ್ತಕಗಳನ್ನು ಬರೆದರು. ಕೆಲವರು ವಿವಿಧ ಸಂಘಟನೆಗಳ ಮೂಲಕ ರಾಜಧಾನಿಯಲ್ಲಿ ಉಪವಾಸ ಮಾಡಿದರು. ನಂತರ ರಾಜ್ಯವೊಂದರ ಮುಖ್ಯಮಂತ್ರಿಯಾದ ಅವರಿಗೆ ಭ್ರ್ರಷ್ಟಾಚಾರ ನಿಲ್ಲಿಸಲು ಏಕೆ ಸಾಧ್ಯವಾಗಲಿಲ್ಲ.

ನಮ್ಮ ಭಾರತ ಭ್ರಷ್ಟಾಚಾರ ಮುಕ್ತವಾಗಬೇಕು ಎಂದು ಸಂಸತ್‍ಗೆ ನಮನ ಸಲ್ಲಿಸಿದ 56 ಎದೆ ಇಂಚಿನ ನಾಯಕ ಇಂದು ಅದನ್ನು ಸಾಧ್ಯವಾಗಿಸುತ್ತಿದ್ದಾರೆ. ದೇಶ ಬದಲಾವಣೆ ಆಗುತ್ತಿದೆ. ಈ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಮನೆಯಲ್ಲಿ ಕುಳಿತುಕೊಳ್ಳದೆ ಸಮಾಜದ ಉದ್ಧಾರಕ್ಕೆ ಮೀಸಲಿಡೋಣ ಎಂದು ಕರೆ ಕೊಟ್ಟರು. ದಿವ್ಯ ಸಾನ್ನಿದ್ಯ ವಹಿಸಿದ್ದ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರ ರಾಜೇಂದ್ರ ಸ್ವಾಮಿಜಿ ಆಶೀರ್ವಚನ ನೀಡಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin