ಹಿಂದೂಗಳಲ್ಲೂ ಭಯೋತ್ಪಾದಕರಿದ್ಧಾರೆ : ಕಮಲ್ ವಿವಾದಾತ್ಮಕ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kamal-Hassna--01

ಚೆನ್ನೈ, ನ.2-ಹಿಂದು ಭಯೋತ್ಪಾದನೆ ಇಲ್ಲವೆಂದು ನಾನು ಹೇಳಲಾರೆ. ಬಲ ಪಂಥೀಯರ ಶಿಬಿರದಲ್ಲೂ ಭಯೋತ್ಪಾದನೆ ಹರಡಿದೆ ಎಂದು ಖ್ಯಾತ ಚಿತ್ರನಟ ಕಮಲ್‍ಹಾಸನ್ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ವಿವಾದಾತ್ಮಕ ಕೇಸರಿ ಭಯೋತ್ಪಾದನೆ ವಿಷಯ ಕುರಿತ ಚರ್ಚೆಗೆ ಮುಂದಾಗಿರುವ ಕಮಲ್, ಹಿಂದು ಭಯೋತ್ಪಾದನೆ ಇಲ್ಲ ಎಂಬ ಸಂಗತಿಗೆ ಬಲಪಂಥೀಯರು ಸವಾಲು ಒಡ್ಡಲು ಸಾಧ್ಯವಿಲ್ಲ. ಅವರ ಶಿಬಿರದಲ್ಲೂ ಉಗ್ರವಾದ ಹರಡಿದೆ. ಇಂಥ ಚಟುವಟಿಕೆಗಳಿಂದ ಅವರಿಗೆ ಯಾವುದೇ ರೀತಿಯಲ್ಲಿಯೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ. ಒನ್ ಕೆನಾಟ್ ಸೇ ದೇರ್ ಇಸ್ ನೋ ಹಿಂದು ಟೆರ್ರರ್ ಎನಿಮೋರ್ ಎಂಬ ಶೀರ್ಷಿಕೆಯ ಅಂಕಣದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

Facebook Comments

Sri Raghav

Admin