ಹಿಂದ ನಾಯಕನಾಗಲು ಹೊರಟಿರುವ ಈಶ್ವರಪ್ಪಗೆ ಬಿಎಸ್‍ವೈ ಬ್ರೇಕ್..?

ಈ ಸುದ್ದಿಯನ್ನು ಶೇರ್ ಮಾಡಿ

eshwaraPP-A

ಬೆಂಗಳೂರು, ಆ.17- ರಾಯಣ್ಣ ಬ್ರಿಗೇಡ್ ಮೂಲಕ ಪಕ್ಷದಲ್ಲಿ ಪ್ರತ್ಯೇಕ ಅಸ್ತಿತ್ವ ಕಂಡುಕೊಳ್ಳಲು ಮುಂದಾಗಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪಗೆ ಬ್ರೇಕ್ ಹಾಕಲು ಬಿ.ಎಸ್.ಯಡಿಯೂರಪ್ಪ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಹೈಕಮಾಂಡ್ ಗೆ ದೂರು ನೀಡಿದ್ದ ಈಶ್ವರಪ್ಪ ತಂತ್ರವನ್ನೇ ಅನುಸರಿಸುವ ಸ್ಕೆಚ್ ಹಾಕಿದ್ದಾರೆ.  ಪದಾಧಿಕಾರಿಗಳ ಪಟ್ಟಿ ಹಿಡಿದು ದೆಹಲಿಗೆ ತೆರಳಿ ಹೈಕಮಾಂಡ್‍ಗೆ ದೂರು ನೀಡಿದ್ದ ಈಶ್ವರಪ್ಪ ತಂತ್ರವನ್ನು ಇದೀಗ ಅವರ ವಿರುದ್ಧವೇ ಪಕ್ಷದ ರಾಜ್ಯಾಧ್ಯಕ್ಷ ಪ್ರಯೋಗಿಸಲು ಮುಂದಾಗಿದ್ದಾರೆ. ಈಶ್ವರಪ್ಪ ಅವರ ಹಿಂದ ಸಭೆ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು, ಹಿಂದುಳಿದ ವರ್ಗ, ಎಸ್‍ಸಿ ಮೋರ್ಚಾದಿಂದ ಬಿಎಸ್‍ವೈಗೆ ದೂರು ಸಲ್ಲಿಕೆಯಾಗಿದೆ.

ಇದರ ಹಿಂದಿರುವುದು ಯಡಿಯೂರಪ್ಪ ಅವರೇ ಅನ್ನೋದು ವಿಶೇಷ.ದೂರು ನೀಡುವಂತೆ ಯಡಿಯೂರಪ್ಪ ನೀಡಿದ್ದ ಸಲಹೆಯಂತೆ ಬಿಜೆಪಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ವೀರಯ್ಯ ಅವರು ದೂರು ಸಲ್ಲಿಕೆ ಮಾಡಿದ್ದಾರೆ. ಹಿಂದುಳಿದ ವರ್ಗ ಮೋರ್ಚಾ, ಎಸ್‍ಸಿ ವರ್ಗದ ಮೋರ್ಚಾಗಳ ಗಮನಕ್ಕೆ ಬಾರದೇ ಸಭೆ ನಡೆದಿದೆ, ಪಕ್ಷದ ಇಮೇಜ್‍ಗೆ ಧಕ್ಕೆ ಆಗುವ ರೀತಿ ಚಟುವಟಿಕೆ ನಡೆಸುತ್ತಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ಕ್ರಮವನ್ನು ರಾಜ್ಯ ಬಿಜೆಪಿ ಘಟಕವೇ ಕೈಗೊಳ್ಳಬೇಕು ಎಂದು ಯಡಿಯೂರಪ್ಪಗೆ ಸಲ್ಲಿಸಿರುವ ಅಧಿಕೃತ ದೂರಿನಲ್ಲಿ ಒತ್ತಾಯ ಮಾಡಲಾಗಿದೆ. ಹಿಂದುಳಿದ ವರ್ಗ ಮೋರ್ಚಾ, ಎಸ್‍ಸಿ ಮೋರ್ಚಾದ ಅಧ್ಯಕ್ಷರು ನೀಡಿರುವ ದೂರನ್ನು ಇಟ್ಟುಕೊಂಡು ಹೈಕಮಾಂಡ್ ಗಮನಕ್ಕೆ ತರಲು ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin