ಹಿಂಸಾಚಾರದಿಂದ ತತ್ತರಿಸಿದ ಸಿರಿಯಾದಲ್ಲಿ ಕುಡಿಯಲು ನೀರಿಲ್ಲದೆ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

Siriya

ಡಮಾಸ್ಕಸ್, ಜ.8-ಹಿಂಸಾಚಾರದಿಂದ ತತ್ತರಿಸಿ ಕದನವಿರಾಮ ಏರ್ಪಟ್ಟಿರುವ ಸಿರಿಯಾ ರಾಜಧಾನಿ ಡಮಾಸ್ಕಸ್‍ನಲ್ಲಿ 55 ಲಕ್ಷ ಮಂದಿಗೆ ಕಳೆದ ಎರಡು ವಾರಗಳಿಂದ ನೀರಿಲ್ಲದೇ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದೆಡೆ ಜಲಮೂಲಕ್ಕಾಗಿ ಹಾಹಾಕಾರ ಎದ್ದಿದ್ದರೆ ಇನ್ನೊಂದೆಡೆ ನಿರ್ಜಲೀಕರಣದಿಂದ (ಡಿ-ಹೈಡ್ರೇಷನ್)ರೋಗಕ್ಕೆ ಗುರಿಯಾಗುವ ಅಪಾಯಕ್ಕೆ ಅಲ್ಲಿನ ಮಕ್ಕಳು ಸಿಲುಕಿದ್ದಾರೆ.  ಮಕ್ಕಳು ನಿರ್ಜಲೀಕರಣ ಮತ್ತು ಕಲುಷಿತ ನೀರಿನಿಂದ ಹರಡುವ ರೋಗಗಳಿಗೆ ಮಕ್ಕಳು ಗುರಿಯಾಗುವ ಅಪಾಯವಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ರಕ್ಷಣೆ ವಿಭಾಗ ಯುನಿಸೆಫ್ ವಕ್ತಾರ ಕ್ರಿಸ್ಟೊಫ್ ಬೌಲಿಯರಕ್ ಆತಂಕ ವ್ಯಕ್ತಪಡಿಸಿದ್ದಾರೆ.

ಡಮಾಸ್ಕಸ್‍ಗೆ ನೀರು ಪೂರೈಸುವ ಎರಡು ಮಹತ್ವದ ಜಲಮೂಲಗಳಾದ ವಾಡಿ ಬರಡಾ ಮತ್ತು ಐನ್-ಅಲ್-ಫಿಜಾಕ್ ಜಲಾಶಯಗಳನ್ನು ಯುದ್ದದ ವೇಳೆ ಉದ್ದೇಶಪೂರ್ವಕವಾಗಿಯೇ ಗುರಿ ಮಾಡಲಾದ ಕಾರಣ ರಾಜಧಾನಿಯಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ.  ಸಿರಿಯಾ ಸರ್ಕಾರ ಮತ್ತು ಹಿಜ್‍ಬುಲ್ ಬಂಡುಕೋರರು ಬರಡಾ ಕಣಿವೆಯಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ವಶದಲ್ಲಿರುವ ಕೆಲವು ಗ್ರಾಮಗಳ ಮೇಲೆ ಬಾಂಬ್ ಮತ್ತು ಷೆಲ್ ದಾಳಿಗಳನ್ನು ಮುಂದುವರಿಸಿದ್ದಾರೆ. ಜನರಿಗೆ ನೀರು ನಿರಾಕರಿಸುವುದು ಹಾಗೂ ಉದ್ದೇಶಪೂರ್ವಕವಾಗಿ ನೀರು ಪೂರೈಕೆ ನಿಲ್ಲಿಸುವುದು ಯುದ್ಧಾಪರಾಧವಾಗುತ್ತದೆ ಎಂದು ಸಿರಿಯಾದಲ್ಲಿರುವ ವಿಶ್ವಸಂಸ್ಥೆ ರಾಯಭಾರಿ ಜಾನ್ ಎಗೆಲ್ಯಾಂಡ್ ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin