ಹಿಂಸಾಚಾರದಿಂದ ಬಿಜೆಪಿ ಬೆಳವಣಿಗೆ ತಡೆಯಲು ಸಾಧ್ಯವಿಲ್ಲ : ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

Amith-sha

ತಿರುವನಂತಪುರಂ,ಜೂ.4- ಆಡಳಿತ ಪಕ್ಷ ಸಿಪಿಐ(ಎಂ) ಕೇಸರಿ ಕಾರ್ಯ ಕರ್ತರ ಮೇಲೆ ಹಿಂಸಾಚಾರ ಮಾಡುವು ದರಿಂದ ಕೇರಳದಲ್ಲಿ ಬಿಜೆಪಿಯನ್ನು ಹತ್ತಿಕ್ಕಬಹುದು ಎಂಬ ಭ್ರಮೆಯಲ್ಲಿದೆ. ಯಾವುದೇ ಅಡ್ಡಿ ಎದುರಾದರೂ ಪಕ್ಷದ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.  ಕೇರಳ ರಾಜ್ಯ ಬಿಜೆಪಿ ಘಟಕದ ನೂತನ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತವರು ಜಿಲ್ಲೆಯಾದ ಕಣ್ಣೂರು ವ್ಯಾಪ್ತಿಯಲ್ಲಿ ಆರ್‍ಎಸ್‍ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗಿರುವುದು ಮುಖ್ಯಮಂತ್ರಿಗಳಿಗೆ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.ಕೇರಳದಲ್ಲಿ ನಡೆಯುತ್ತಿರುವ ಕೇಸರಿ ಕಾರ್ಯಕರ್ತರ ಮೇಲಿನ ಹಿಂಸಾಚಾರದಿಂದ ಬಿಜೆಪಿ ಬೆಳವಣಿಗೆಗೆ ಅಡ್ಡಿ ಉಂಟಾಗುತ್ತದೆ ಎಂಬ ಸಿಪಿಐ(ಎಂ)ನ ಯೋಜನೆ ಅರ್ಥಹೀನವಾದದ್ದು. ಇಂತಹ ಹಿಂಸಾಚಾರಗಳಿಂದ ಕೇರಳದಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆಯ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ ಎಂದು ಅಮಿತ್ ಷಾ ಸ್ಪಷ್ಟಪಡಿಸಿದರು. ಕೇರಳದಲ್ಲಿ ಎಡಪಕ್ಷದ ಕಾರ್ಯಕರ್ತರ ಹಿಂಸಾಚಾರ ಹೆಚ್ಚಾದಷ್ಟು ಅದರಿಂದ ಆ ಪಕ್ಷಕ್ಕೇ ತೊಂದರೆಯಾಗುತ್ತದೆ. ಇನ್ನೊಂದೆಡೆ ರಾಜ್ಯದಲ್ಲಿ ಕಮಲ ಮತ್ತಷ್ಟು ಅರಳಲು ಇದೇ ವರದಾನವಾಗಲಿದೆ ಎಂದು ಅವರು ವ್ಯಾಖ್ಯಾನಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin