ಹಿಂಸಾಚಾರದ ಲಾಭ ಪಡೆದು ಕಾಶ್ಮೀರದೊಳನುಸುಳಿದ ಉಗ್ರರು

ಈ ಸುದ್ದಿಯನ್ನು ಶೇರ್ ಮಾಡಿ

terror

ಶ್ರೀನಗರ, ಆ.18-ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ದುರ್ಲಾಭ ಪಡೆದ ಭಯೋತ್ಪಾದಕರು ಕೇಂದ್ರ ಮತ್ತು ಮಧ್ಯೆ ಕಾಶ್ಮೀರದೊಳಗೆ ನುಸುಳಿರುವ ಬಗ್ಗೆ ಗುಪ್ತಚರ ವರದಿ ತಿಳಿಸಿದೆ.  ಉತ್ತರ ಕಾಶ್ಮೀರದ ಕುಪ್ವಾರ ಮತ್ತು ಉರಿ ವಲಯಗಳಲ್ಲಿನ ಭಯೋತ್ಪಾದಕರು ಈ ಎರಡು ಪ್ರದೇಶದ ಒಳಗೆ ನುಸುಳಿದ್ದಾರೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆತಂಕವಾದಿಗಳು ಕಣಿವೆಯ ಒಂದು ಭಾಗದಿಂದ ಇನ್ನೊಂದು ಭಾಗದತ್ತ ಚಲಿಸುತ್ತಿದ್ದಾರೆ ಎಂದು ಹಿರಿಯ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಜುಲೈ 8 ರಂದು ಹಿಜ್ಬುಲ್ ಕಮಾಂಡರ್ ಬರ್ಹಾನ್ ವನಿಯನ್ನು ಗಡಿ ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದ ನಂತರ ಕಣಿವೆಯಲ್ಲಿ ಭುಗಿಲೆದ್ದ ಅಶಾಂತಿ ಮತ್ತು ಹಿಂಸಾಚಾರದ ದುರ್ಲಾಭ ಪಡೆದು ಸಮಯ ಸಾಧಿಸಿ ಭಾರತೀಯ ಗಡಿಯತ್ತ ಅತಿಕ್ರಮಣ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin