ಹಿಂಸಾಚಾರ ಪೀಡಿತ ಕಾಶ್ಮೀರದ ಕುಪ್ವಾರದಲ್ಲಿ ಸೇನೆ-ಉಗ್ರರ ಗುಂಡಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

Firing-i-Kashmir

ಶ್ರೀನಗರ, ಆ.21- ಹಿಂಸಾಚಾರ ಪೀಡಿತ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ಪ್ರದೇಶದಲ್ಲಿ ಉಗ್ರಗಾಮಿಗಳು ಮತ್ತು ಭಾರತೀಯ ಸೇನೆ ನಡುವೆ ಇಂದು ಮುಂಜಾನೆ ಗುಂಡಿನ ಚಕಮಕಿ ನಡೆದ ಬಗ್ಗೆ ವರದಿಯಾಗಿದೆ. ಕುಪ್ವಾರ ಗಡಿ ಪ್ರದೇಶದ ಬಳಿ ನಾಲ್ವರು ಪಾಕ್ ಬೆಂಬಲಿತ ಉಗ್ರರು ಅಡಗಿಕೊಂಡಿರುವ ಸುಳಿವಿನ ಮೇಲೆ ಆ ಪ್ರದೇಶದ ಸೇನಾಪಡೆಗಳು ತೆರಳಿದಾಗ, ಆತಂಕವಾದಿಗಳು ಗುಂಡು ಹಾರಿಸಿದರು.  ಉಗ್ರರ ದಾಳಿಗೆ ಪ್ರತ್ಯುತ್ತರ ನೀಡಿದ ಸೇನಾಪಡೆಗಳು ಗುಂಡಿನ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಎರಡೂ ಕಡೆಯಿಂದ ದಾಳಿ-ಪ್ರತಿದಾಳಿ ನಡೆದಿದೆ. ಉಗ್ರರನ್ನು ನಿಗ್ರಹಿಸಲು ಬಿಎಸ್ಎಫ್ ಯೋಧರು ಎನ್ಕೌಂಟರ್ ನಡೆಸಿದರು ಎಂದು ಇತ್ತೀಚಿನ ವರದಿಗಳು ಹೇಳಿವೆ.

ಈ ಮಧ್ಯೆ ಪ್ರಕ್ಷುಬ್ಧಮಯ ಕಾಶ್ಮೀರದ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಸೇನಾಪಡೆಗಳನ್ನು ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಕರ್ಫ್ಯೂ 44ನೆ ದಿನಕ್ಕೆ ಕಾಲಿಟ್ಟಿದೆ.

► Follow us on –  Facebook / Twitter  / Google+

Facebook Comments

Sri Raghav

Admin