ಹಿಜ್ಬುಲ್ ಮುಜಾಹಿದೀನ್ ವಿದೇಶಿ ಭಯೋತ್ಪಾದಕ ಸಂಘಟನೆ: ಅಮೆರಿಕ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

HM-USAವಾಷಿಂಗ್ಟನ್, ಅ.19-ಈಗಾಗಲೇ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)  ಮೂಲದ ಭಯೋತ್ಪಾದಕ ಸಯ್ಯದ್ ಸಲ್ಲಾಹುದ್ದೀನ್‍ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿರುವ ಅಮೆರಿಕ ಅವನ ನೇತೃತ್ವದಲ್ಲಿದ್ದ ಪಾಕಿಸ್ತಾನದ ಹಿಜ್ಬುಲ್ ಮುಜಾಹಿದೀನ್(ಎಚ್.ಎಂ) ಸಂಘಟನೆಯನ್ನು ವಿದೇಶಿ ಉಗ್ರ ಸಂಘಟನೆ ಎಂದು ಹೆಸರಿಸಿ ನಿಷೇಧಿಸಿದೆ. ಪಾಕ್ ಮೂಲದ ಸಂಘಟನೆಗಳು ಸೇರಿದಂತೆ 60 ಉಗ್ರ ಸಂಘಟನೆಗಳನ್ನು  ಅಮೆರಿಕ ಈಗಾಗಲೇ ನಿಷೇಧಿಸಿ ಕಪ್ಪು ಪಟ್ಟಿಗೆ ಸೇರಿಸಿದೆ. ಪ್ರಸ್ತುತ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಂದು ಕಪ್ಪು ಪಟ್ಟಿಗೆ ಸೇರಿಸಿ ನಿಷೇಧಿಸಿರುವುದರಿಂದ ಅಮೆರಿಕದ ಯಾವುದೇ ಸಂಘಟನೆಯಾಗಲಿ, ವ್ಯಕ್ತಿಗಳಾಗಲಿ ಆ ಸಂಘಟನೆ ಅಥವಾ ಸದಸ್ಯರೊಂದಿಗೆ ಯಾವುದೇ ರೀತಿಯಾಗಿ ವ್ಯವಹರಿಸುವಂತಿಲ್ಲ.

ಸಯ್ಯದ್ ಸಲಾಹುದ್ದೀನ್‍ನನ್ನು ಕಳೆದ ಎರಡು ತಿಂಗಳ ಹಿಂದಷ್ಟೇ ಅಮೆರಿಕ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಅವನ ವಿರುದ್ದ ನಿಷೇಧ ಹೇರಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭ ಶ್ವೇತಭವನ ಈ ಆದೇಶ ಹೊರಡಿಸಿತ್ತು. ಈ ನಿಷೇಧದಿಂದಾಗಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದ ಯಾವುದೇ ಆಸ್ತಿಪಾಸ್ತಿಗಳು, ಬ್ಯಾಂಕ್ ಖಾತೆಗಳನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಹಿಜ್ಬುಲ್ ಮುಜಾಹಿದೀನ್ ಸಂಘಟನೆಯನ್ನು ನಿಷೇಧಿಸಿರುವುದರಿಂದ ಭಯೋತ್ಪಾದನೆ ಸಂಪೂರ್ಣವಾಗಿ ನಾಶವಾಗುವುದಿಲ್ಲವಾದರೂ ಸದ್ಯಕ್ಕೆ ಆ ಸಂಘಟನೆಯ ಉಪಟಳವನ್ನು ಕೊಂಚ ಮಟ್ಟಿಗಾದರೂ ನಿಯಂತ್ರಿಸಲು ಅನುಕೂಲವಾಗುತ್ತದೆ.

Facebook Comments

Sri Raghav

Admin