ಹಿಟ್ ಅಂಡ್ ರನ್’ಗೆ ಪೊಲೀಸ್ ಕಾನ್‍ಸ್ಟೆಬಲ್ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Police

ಬೆಂಗಳೂರು, ಮಾ.17-ಅತಿವೇಗವಾಗಿ ಬಂದ ವಾಹನವೊಂದು ಕಾನ್‍ಸ್ಟೆಬಲ್‍ವೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬ್ಯಾಟರಾಯನಪುರ ಸಂಚಾರಿ ಠಾಣೆಯ ಕಾನ್‍ಸ್ಟೆಬಲ್ ರವಿಶಂಕರ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.  ಇಂದು ಮಧ್ಯಾಹ್ನ 12.45 ರ ಸಮಯದಲ್ಲಿ ರವಿಶಂಕರ್ ಹೊಸಕೆರೆ ಹಳ್ಳಿ ಬಳಿಯ ನೈಸ್‍ರಸ್ತೆ ಜಂಕ್ಷನ್ ಸಮೀಪ ಹೋಗುತ್ತಿದ್ದಾಗ ವಾಹನವೊಂದು ಇವರಿಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮೀಷನರ್ ಹಿತೇಂದ್ರ ಅವರು ಈ ಸಂಜೆಗೆ ತಿಳಿಸಿದ್ದಾರೆ. ಅಪಘಾತ ಮಾಡಿದ ಚಾಲಕ ವಾಹನ ನಿಲ್ಲಿಸದೆ ಚಲಾಯಿಸಿಕೊಂಡು ಹೋಗಿದ್ದಾನೆ. ರವಿಶಂಕರ್ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಕಾನ್‍ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.

Facebook Comments

Sri Raghav

Admin