ಹಿಟ್ ಅಂಡ್ ರನ್ : 9 ಮಕ್ಕಳ ಸಾವಿಗೆ ಕಾರಣನಾದ ಬಿಹಾರದ ಬಿಜೆಪಿ ಮುಖಂಡ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arrest-BJP

ಪಾಟ್ನಾ, ಫೆ.28-ಪಾನಮತ್ತನಾಗಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿ ಒಂಭತ್ತು ಶಾಲಾ ಮಕ್ಕಳ ಸಾವಿಗೆ ಕಾರಣನಾದ ಬಿಹಾರದ ಬಿಜೆಪಿ ಮುಖಂಡ ಮನೋಜ್ ಭೈತಾ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾನೆ. ಹಿಟ್ ಅಂಡ್ ರನ್ ಪ್ರಕರಣದ ನಂತರ ಶನಿವಾರದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಇಂದು ಮುಜಾಫರ್‍ಪುರ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಪೊಲೀಸರು ಆತನನ್ನು ಬಂಧಿಸಿದರು.  ಮನೋಜ್ ಚಾಲನೆ ಮಾಡುತ್ತಿದ್ದ ಬೊಲೆರೋ ವಾಹನ ಶಾಲೆಯೊಂದಕ್ಕೆ ನುಗ್ಗಿ ಒಂಭತ್ತು ಮಕ್ಕಳನ್ನು ಬಲಿ ಪಡೆದಿತ್ತು. ಈ ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದರು. ಪಾನ ನಿಷೇಧ ಜಾರಿಯಲ್ಲಿರುವ ಬಿಹಾರ ರಾಜ್ಯದಲ್ಲಿ ಬಿಜೆಪಿ ಮುಖಂಡನ ಈ ಕೃತ್ಯ ಪಕ್ಷಕ್ಕೆ ಭಾರೀ ಮುಜುಗರ ತಂದೊಡ್ಡಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin