ಹಿಡಕಲ್ ಜಲಾಶಯದಿಂದ ಆನದಿನ್ನಿ ಬ್ಯಾರೇಜ್‍ಗೆ ಬಿಡುಗಡೆ ನೀರು

ಈ ಸುದ್ದಿಯನ್ನು ಶೇರ್ ಮಾಡಿ

2

ಬಾಗಲಕೋಟ,ಫೆ.28- ಹಿಡಕಲ್ ಜಲಾಶಯದಿಂದ ಬಿಡುಗಡೆ ಮಾಡಿರುವ ನೀರು ತಾಲೂಕಿನ ಆನದಿನ್ನಿ ಬ್ಯಾರೇಜ್‍ಗೆ ತಲುಪಿದ್ದು ಶಾಸಕ ಎಚ್.ವೈ. ಮೇಟಿ ಅವರು ಭೇಟಿ  ನೀಡಿ ವೀಕ್ಷಣೆ ಮಾಡಿದರು.0.107 ಟಿಎಂಸಿ ಸಾಮಥ್ರ್ಯ ಬ್ಯಾರೇಜ್‍ನಲ್ಲಿ ಹಿಡಕಲ್ ಜಲಾಶಯದಿಂದ ಬಿಟ್ಟಿರುವ 0.065 ಟಿಎಂಸಿ ನೀರು ಸಂಗ್ರಹವಾಗಿದ್ದು, ಇದರಿಂದ ಜಿಲ್ಲೆ ಹಾಗೂ ನವನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಂತಾಗಿದೆ. ಅಲ್ಲದೆ ಇನ್ನೂ ಹೆಚ್ಚುವರಿ ನೀರನ್ನು ಮುಂಬರುವ ದಿನಗಳಲ್ಲಿ ಬಿಡಿಸುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ನಾಗರಾಜ ಹದ್ಲಿ, ರಜಾಕ ಹಳ್ಳೂರ, ಮಹೇಶ ಗದ್ದನಕೇರಿ ಶರಣಪ್ಪ ಮಾಗನೂರ, ಶಫೀಕ ದೊಡ್ಡಕಟ್ಟಿ ಇತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin