ಹಿಮದಿಂದ ಇನ್ನೂ ಹೊರ ತೆಗೆಯಲಾಗಿಲ್ಲ ಹುತಾತ್ಮ ಸಂದೀಪ್‍’ರ ಮೃತದೇಹ

ಈ ಸುದ್ದಿಯನ್ನು ಶೇರ್ ಮಾಡಿ

Sandeep-Kumar

ಹಾಸನ, ಜ.29-ಜಮ್ಮುವಿನಲ್ಲಿ ಸತತವಾಗಿ ಹಿಮಪಾತವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಜನವರಿ 25ರಂದು ಹಿಮಪಾತಕ್ಕೆ ಸಿಲುಕಿ ಹುತಾತ್ಮನಾದ ವೀರಯೋಧ ಸಂದೀಪ್‍ಕುಮಾರ್ ಅವರ ಮೃತದೇಹವನ್ನು ಘಟನಾ ಸ್ಥಳದಿಂದ ಹೊರತೆಗೆಯಲು ಸಾಧ್ಯವಾಗಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಶ್ರೀನಗರಕ್ಕೆ ಸಂದೀಪ್ ಮೃತದೇಹ ಸಾಗಿಸಲು ವಿಳಂಬವಾಗಿದೆ. ಕಳೆದ ರಾತ್ರಿ ಈ ಮಾಹಿತಿಯನ್ನು ಸಂದೀಪ್ ಸಂಬಂಧಿಕರಿಗೆ ಸೇನಾಧಿಕಾರಿಗಳು ತಿಳಿಸಿದ್ದಾರೆ. ಗಾಢಹಿಮ ಕರಗಿದರೆ ಇಂದು ಬೆಳಗ್ಗೆ 10 ಗಂಟೆ ನಂತರ ಮತ್ತೆ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಪಾರ್ಥಿವ ಶರೀರದ ದರ್ಶನಕ್ಕಾಗಿ ಸಂದೀಪ್ ಕುಟುಂಬ ಸದಸ್ಯರು ಕಾಯುತ್ತಿದ್ದಾರೆ.

Sandeep-Shetty

ವೀರಯೋಧ ಸಂದೀಪ್ ಅಮರನಾಗಿ ಇಂದಿಗೆ ಐದು ದಿನಗಳು ಕಳೆದಿವೆ. ಘಟನಾ ಸ್ಥಳದಿಂದ ಇನ್ನೂ ಮೃತದೇಹ ತೆಗೆಯಲು ಸಾಧ್ಯವಾಗುತ್ತಿಲ್ಲ. ಕಾರ್ಯಾಚರಣೆ ಸಾಧ್ಯವಾದರೆ ಅಲ್ಲಿಂದ ಶ್ರೀನಗರಕ್ಕೆ ಮೃತದೇಹ ತಂದು ಸ್ವಗ್ರಾಮಕ್ಕೆ ತರಲಾಗುವುದು. ಆನಂತರ ಅಂತ್ಯಸಂಸ್ಕಾರ ನಡೆಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin