ಹಿಮಾಚಲ ಪ್ರದೇಶದಲ್ಲಿ 4.6ರಷ್ಟು ತೀವ್ರತೆಯ ಸರಣಿ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Eathqwuake-cv

ನವದೆಹಲಿ,ಆ.27-ಹಿಮಾಚಲ ಪ್ರದೇಶದಲ್ಲಿ ಇಂದು ಬೆಳಗ್ಗೆ ಸಾಧಾರಣ ತೀವ್ರತೆಯ ಸರಣಿ ಭೂಕಂಪಗಳು ಸಂಭವಿಸಿದ್ದು , ಸಾವು-ನೋವು ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ. ಭೂಕಂಪದಿಂದ ಭೀತಿಗೊಂಡ ಜನರು ಮನೆಗಳಿಂದ ಹೊರಗೋಡಿ ಬಂದು ಅಲ್ಲಲ್ಲೇ ರಕ್ಷಣೆ ಪಡೆದರು. ಈ ಭಾಗದಲ್ಲಿ ಜನರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಹಿಮಾಲಯ ಪರ್ವತ ಪ್ರಾಂತ್ಯದಲ್ಲಿ 20 ನಿಮಿಷಗಳ ಅಂತರದಲ್ಲಿ ಎರಡು ಕಡೆ 4.6ರಷ್ಟು ತೀವ್ರತೆಯ ಕಂಪನಗಳು ಸಂಭವಿಸಿವೆ ಎಂದು ನ್ಯಾಷನಲ್ ಸೆಂಟರ್ ಆಫ್ ಸೇಸ್ಮೊಲಾಜಿ ತಿಳಿಸಿದೆ. ಹಿಮಾಚಲ ಪ್ರದೇಶದ ಕುಲು ಪ್ರಾಂತ್ಯದಲ್ಲಿ ಭೂಕಂಪನಗಳ ಕೇಂದ್ರಬಿಂದು ದಾಖಲಾಗಿತ್ತು.

ಇಂದು ಬೆಳಗ್ಗೆ 6.44ರಲ್ಲಿ 4.6ರ ತೀವ್ರತೆಯ ಮೊದಲ ಭೂಕಂಪ ದಾಖಲಾಗಿದ್ದು, ಭೂಮಿಯಿಂದ 10 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಪತ್ತೆಯಾಗಿದೆ.  ಪುನಃ ಬೆಳಗ್ಗೆ 7.05ರ ಸಮಯದಲ್ಲಿ 4.3 ತೀವ್ರತೆಯ 2ನೇ ಕಂಪನ ಸಂಭವಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಯಾವುದೇ ಹಾನಿಯ ಬಗ್ಗೆ ಇನ್ನೂ ವರದಿಗಳು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin