ಹಿರಿಯ ಕವಿ ಸಾಹಿರ್ ಲೂಧಿಯಾನ್ವಿ ಪಾತ್ರದಲ್ಲಿ ಶಾರುಕ್

ಈ ಸುದ್ದಿಯನ್ನು ಶೇರ್ ಮಾಡಿ

6

ಎಲ್ಲವೂ ಅಂದುಕೊಂಡಂತೆ ನಡೆದರೆ ಬಾಲಿವುಡ್ ಬಾದ್‍ಶಾ ಶಾರುಕ್ ಖಾನ್ ಭಾರತದ ಖ್ಯಾತ ಹಿರಿಯ ಕವಿ ಸಾಹಿರ್ ಲೂಧಿಯಾನ್ವಿ ಪಾತ್ರದಲ್ಲೂ ಮಿಂಚಲಿದ್ದಾನೆ. ಈ ಮಹತ್ವದ ಯೋಜನೆಗಾಗಿ ಸೂಪರ್‍ಸ್ಟಾರ್ ಎಸ್‍ಆರ್‍ಕೆ ಸದ್ಯದಲ್ಲೇ ಬಾಲಿವುಡ್‍ನ ಸ್ಟಾರ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಭೇಟಿ ಮಾಡಲಿದ್ದಾನೆ.  ಕೈತುಂಬಾ ಪ್ರಾಜೆಕ್ಟ್ ಗಳಿವೆಯಾದರೂ, ಸಾಹಿರ್ ಲೂಧಿಯಾನ್ವಿ ಚಿತ್ರದ ಸ್ಕ್ರಿಪ್ಟ್ ಬಗ್ಗೆ ಬಹು ಆಕರ್ಷಿತನಾಗಿರುವ ಶಾರುಕ್ ಆ ಸಿನಿಮಾದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ. ವಾಸ್ತವವಾಗಿ ಈ ಸ್ಕ್ರಿಪ್ಡ್ ಎಸ್‍ಆರ್‍ಕೆಯ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್‍ನಲ್ಲಿತ್ತು. ಅದನ್ನು ಸಂಜಯ್ ತೆಗೆದುಕೊಂಡಿದ್ದಾರೆ. ಜಸ್‍ನೀತ್ ಈ ಸ್ಕ್ರಿಪ್ಟ್ ಬರೆದಿದ್ದು, ಆ ಕಥೆ ಶಾರುಕ್‍ಗೆ ತುಂಬಾ ಇಷ್ಟವಾಗಿದೆ.

ನಾನು ಸ್ಕ್ರಿಪ್ಟ್ ನೋಡಿದ್ದೇನೆ. ಕಥೆ ಕೇಳಿದ್ದೇನೆ. ನನಗೆ ತುಂಬಾ ಹಿಡಿಸಿದೆ. ಆದರೆ ಈ ಬಗ್ಗೆ ನಾವು ಇನ್ನೂ ಖಚಿತಪಡಿಸಿಲ್ಲ. ಸಂಜಯ್ ನನ್ನನ್ನು ಸಂಪರ್ಕಿಸಿದ ನಂತರ ಈ ಯೋಜನೆ ರೂಪ ಪಡೆಯಲಿದೆ ಎಂದು ಆತ ಸಂದರ್ಶನವೊಂದರಲ್ಲಿ ತಿಳಿಸಿದ್ದಾನೆ.  ರಯೀಸ್ ನಂತರ ನನ್ನ ಮತ್ತು ಸಂಜಯ್ ಬೇಟಿಯಾಗಲಿದೆ. ಅವರು ಪದ್ಮಾವತಿ ಸಿನಿಮಾ ಪ್ರಾಜೆಕ್ಟ್‍ನಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ನನ್ನ ಬಳಿ ಈಗ ಹಲವು ಕಥೆಗಳು ಮತ್ತು ಪ್ರಾಜೆಕ್ಟ್ ಗಳಿವೆ. ಅವುಗಳಲ್ಲಿ ಸಾಹಿರ್ ಲೂಧಿಯಾನ್ವಿ ಕೂಡ ಒಂದು. ಎರಡು ವರ್ಷಗಳ ಹಿಂದೆಯೇ ಈ ಕಥೆಯನ್ನು ನಾನು ಕೇಳಿದ್ದೆ. ಆದರೆ ಅದು ಸಂಜಯ್ ನಿರ್ದೇಶನದ ಪ್ರಾಜೆಕ್ಟ್ ಆಗಿರಲಿಲ್ಲ. ಈಗ ಸಂಜಯ್ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದು, ನಾನು ನಟಿಸಲು ಉತ್ಸುಕನಾಗಿದ್ದೇನೆ ಎನ್ನುತ್ತಾನೆ ಶಾರುಕ್.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin