ಹಿರಿಯ ನಟಿ ಪದ್ಮಾ ಕುಮುಟಾ ನಿಧನ
ಈ ಸುದ್ದಿಯನ್ನು ಶೇರ್ ಮಾಡಿ
ಬೆಂಗಳೂರು, ಮಾ.6 : ಕನ್ನಡಿಗರಿಗೆ ಚಿರಪರಿಚಿತವಾಗಿದ್ದ ಹಿರಿಯ ನಟಿ ಪದ್ಮಾ ಕುಮುಟಾ (58) ಅವರು ಬೆಂಗಳೂರಿನಲ್ಲಿ ಮಾರ್ಚ್ 6ರಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೋಮವಾರದಂದು ಶೃತಿ ನಾಯ್ಡು ಅವರ ‘ಮಹಾನದಿ’ ಸೀರಿಯಲ್ ಶೂಟಿಂಗ್ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಉಸಿರಾಟದ ತೊಂದರೆಯಿಂದಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಕೊನೆಯುಸಿರೆಳೆದಿದ್ದರು. ನಟಿ ಪದ್ಮಾ ಕುಮುಟಾ ರವರು 1975ರಲ್ಲಿ ತೆರೆಕಂಡಿದ್ದ ಚೋಮನದುಡಿ ಚಿತ್ರದಿಂದ ಹಿಡಿದು ದೇವತಾ ಮನುಷ್ಯ, ಶಿವ ಮೆಚ್ಚಿದ ಕಣ್ಣಪ್ಪ, ಕಳ್ಳ ಮಳ್ಳ, ಸೋಲಿಲ್ಲದ ಸರದಾರ, ಬೇವು ಬೆಲ್ಲ, ಶ್ರೀ ಮಂಜುನಾಥ, ಲಕ್ಕಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments