ಹಿರಿಯ ಪತ್ರಕರ್ತ ಕೆ.ಬಿ.ರಘುರಾಮ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

news--paper
ಯಲಹಂಕ, ನ.5-
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಸದಸ್ಯ ಕೆ.ಬಿ.ರಘುರಾಮ್(48) ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ರಾಜೇಶ್ವರಿ ಮತ್ತು ಮಗ ಶಮಂತ್ ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ.ರಕ್ಷಣಾ ವೇದಿಕೆ ಸಂಸ್ಥಾಪಕ ಸದಸ್ಯರಾಗಿ ಹಲವು ಚಳವಳಿಗಳಲ್ಲಿ ಭಾಗವಹಿಸಿದ್ದ ರಘುರಾಮ್ ಅನೇಕ ಪತ್ರಿಕೆಗಳಲ್ಲಿ ವರದಿ, ಲೇಖನ , ಅಂಕಣ ಬರೆಯುವುದರೊಂದಿಗೆ ನೇರ ಮತ್ತು ನಿಷ್ಠೂರ ವಾದಿ ಎನ್ನಿಸಿಕೊಂಡಿದ್ದರು. ಜಾಣಗೆರೆ ವೆಂಕಟರಾಮಯ್ಯನವರ ಕಟ್ಟಾ ಶಿಷ್ಯರಾಗಿದ್ದ ಇವರು ಕನ್ನಡ ಸೇನೆ ಮತ್ತು ಯಲಹಂಕ ಮಾಧ್ಯಮ ಕೇಂದ್ರ ಎರಡರಲ್ಲೂ ಪ್ರಧಾನ ಕಾರ್ಯದರ್ಶಿಯಾಗಿ ಹಲವು ಹೊರಾಟಗಳಲ್ಲಿ ಭಾಗವಹಿಸುತ್ತಿದ್ದರು.
ಕೃಷಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.

 

 

► Follow us on –  Facebook / Twitter  / Google+

Facebook Comments

Sri Raghav

Admin