ಹಿರಿಯ ಪತ್ರಕರ್ತ, ಜಯಾಲಲಿತಾ ಪರಮಾಪ್ತ ಚೊ.ರಾಮಸ್ವಾಮಿ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Cho-Ramaswamy

ಚೆನ್ನೈ, ಡಿ.7-ಹಿರಿಯ ಪತ್ರಕರ್ತ, ನಟ. ರಾಜ್ಯಸಭೆ ಮಾಜಿ ಸದಸ್ಯ ಮತ್ತು ರಾಜಕೀಯ ವಿಶ್ಲೇಷಕ ಚೊ.ರಾಮಸ್ವಾಮಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಚೋ ಅವರು ಜಯಲಲಿತಾರ ಪರಮಾಪ್ತರಾಗಿದ್ದರು. ತಮಿಳುನಾಡಿನಲ್ಲಿ ಚೊ ಎಂದೇ ಪ್ರಖ್ಯಾತರಾಗಿದ್ದ ಶ್ರೀನಿವಾಸ ಅಯ್ಯರ್ ರಾಮಸ್ವಾಮಿ ಕೆಲದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಅವರು ನಿಧನರಾದರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ತುಘಲಕ್ ನಿಯತಕಾಲಿಕದ ಸ್ಥಾಪಕ ಸಂಪಾದಕರಾಗಿದ್ದ ಅವರು ರಾಜಕೀಯ ವಿಶ್ಲೇಷಕರಾಗಿದ್ದರು. ಚೋ ಅವರು ಜಯಲಲಿತಾರ ಪರಮಾಪ್ತರಾಗಿದ್ದರು. ಕೆಲವು ಸಂದರ್ಭ ಅವರಿಗೆ ರಾಜಕೀಯ ಸಲಹೆಗಳನ್ನು ಸಹ ನೀಡಿದ್ದರು.  ರಜನಿಕಾಂತ್ ಮತ್ತು ಕಮಲಹಾಸನ್ ಸೇರಿದಂತೆ ಖ್ಯಾತ ನಟರೊಂದಿಗೆ ಅನೇಕ ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin