ಹಿರಿಯ ಪೊಲೀಸ್ ಅಧಿಕಾರಿಗಳ ಹೊಂದಾಣಿಕೆ ಕೊರತೆಯೇ ಕಾವೇರಿ ಗಲಭೆಗೆ ಕಾರಣ

ಈ ಸುದ್ದಿಯನ್ನು ಶೇರ್ ಮಾಡಿ

Bakrid

ನವದೆಹಲಿ, ಸೆ.15-ಹಿರಿಯ ಪೊಲೀಸ್ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ಕರ್ನಾಟಕದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಲು ಪ್ರಮುಖ ಕಾರಣ ಎಂದು ಕೇಂದ್ರ ಗುಪ್ತಚರ ವಿಭಾಗ ಬೊಟ್ಟು ಮಾಡಿದೆ.  ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ಮೆಘರಿಕ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಪಟ್ನಾಯಕ್, ಗುಪ್ತಚರ ವಿಭಾಗದ ಮುಖ್ಯಸ್ಥರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಮಾಹಿತಿ ವಿನಿಮಯ ಕೊರತೆ ಉಂಟಾಗಿ ಬೆಂಗಳೂರು ಹೊತ್ತಿ ಉರಿಯಲು ಕಾರಣವಾಯಿತು ಎಂದು ಗುಪ್ತಚರ ವಿಭಾಗದ ವರದಿಯಲ್ಲಿ ಉಲ್ಲೇಖ ಮಾಡಿದೆ. ರಾಜ್ಯ ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗುಪ್ತಚರ ವಿಭಾಗ, ರಾಷ್ಟ್ರೀಯ ಭದ್ರತಾ ವಿಭಾಗ, ಸಂಶೋಧನೆ ಮತ್ತು ವಿಶ್ಲೇಷಣೆಯ ವಿಭಾಗದ ಮುಖ್ಯಸ್ಥರು, ಹಿರಿಯ ಅಧಿಕಾರಿಗಳ ಉದಾಸೀನತೆಯಿಂದ ಕಾವೇರಿ ಗಲಭೆ ಇದ್ದಕ್ಕಿದ್ದಂತೆ ತೀವ್ರ ಸ್ವರೂಪ ಪಡೆಯಿತು.

ತುಸು ಎಡವಿದ್ದರಿಂದ ಪರಿಸ್ಥಿತಿ ಇಂದು ಈ ಮಟ್ಟಕ್ಕೆ ತಲುಪಿತು. ಬೆಂಗಳೂರಿನ ಖ್ಯಾತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗಿದೆ ಎಂದು ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಪಟ್ನಾಯಕ್ ಮತ್ತು ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ಗೆ ಪ್ರತ್ಯೇಕವಾಗಿ ಪತ್ರ ಬರೆಯಲಾಗಿದೆ.

ಕೇಂದ್ರದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಈ ಇಬ್ಬರಿಗೂ ಪತ್ರ ಬರೆದಿದ್ದು, ಗೃಹ ಇಲಾಖೆಯಲ್ಲಿ ಸಮನ್ವತೆಯ ಕೊರತೆ ಇದ್ದುದರಿಂದ 2 ದಶಕಗಳ ನಂತರ ಬೆಂಗಳೂರಿನಲ್ಲಿ ಈ ಮಟ್ಟದ ಗಲಭೆ ಉಂಟಾಯಿತು. ಗುಪ್ತಚರ ವಿಭಾಗ ಮಾಹಿತಿಯನ್ನು ಕಲೆ ಹಾಕಲು ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಸಾಕಷ್ಟು ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳು ಕ್ಷಣಕ್ಷಣಕ್ಕೂ ಅಭಿವೃದ್ಧಿಯಾಗುತ್ತಿವೆ. ಸೋಮವಾರ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮಾರ್ಪಾಡು ಅರ್ಜಿ ಕೈಗೆತ್ತಿಕೊಳ್ಳಲಿದೆ ಎಂಬ ಸಾಮಾನ್ಯ ಜ್ಞಾನÀವಿರುವ ಪ್ರತಿಯೊಬ್ಬ ಪ್ರಜೆಗೂ ಅರಿವಿತ್ತು.

ಬೆಳಗ್ಗೆ 11 ಗಂಟೆಗೆ ನ್ಯಾಯಾಲಯ ಕರ್ನಾಟಕದ ಸರ್ಕಾರದ ಅರ್ಜಿ ತಿರಸ್ಕರಿಸಿ ಹೆಚ್ಚುವರಿ ನೀರು ಹರಿಸುವಂತೆ ನಿರ್ದೇಶನ ನೀಡಿದ ತಕ್ಷಣವೇ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾಪಡೆಯನ್ನು ನಿಯೋಜಿಸಬೇಕಿತ್ತು. ಇದಕ್ಕೂ ಮುನ್ನ ತಮಿಳುನಾಡಿನ ಚೆನ್ನೈ ಮತ್ತು ರಾಮೇಶ್ವರಂನಲ್ಲಿ ಹೊಟೇಲ್, ವಾಹನಗಳು ಮತ್ತು ಕನ್ನಡಿಗರ ಮೇಲೆಹಲ್ಲೆ ನಡೆದಾಗ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕಿತ್ತು. ಕಾವೇರಿ ವಿಷಯ ಅತಿ ಸೂಕ್ಷ್ಮ ಎಂಬುದನ್ನು ತಿಳಿದಿದ್ದ ಪೊಲೀಸರು ಯಾವ ಕಾರಣಕ್ಕಾಗಿ ಭದ್ರತೆಯನ್ನು ಹÉಚ್ಚಿಸಲಿಲ್ಲ, ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂಬ ದುರುದ್ದೇಶ ಇದರಲ್ಲಿ ಅಡಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಗುಪ್ತಚರ ವಿಫಲ: ಇನ್ನು ಗುಪ್ತಚರ ವಿಭಾಗ ಕಾವೇರಿ ವಿಷಯವನ್ನು ಅರಿಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದೆ.

ಸುಪ್ರೀಂಕೋರ್ಟ್ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುತ್ತಿದ್ದಂತೆ ಗಲಭೆಯಾಗಲಿದೆ ಎಂಬ ಮುನ್ಸೂಚನೆ ಅರಿಯಬೇಕಿತ್ತು. ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಸೇರಿದಂತೆ ಕಾವೇರಿ ಜಲಾನಯನ ತೀರ ಪ್ರದೇಶಗಳಲ್ಲಿ ತಕ್ಷಣವೇ ಭದ್ರತಾ ಪಡೆಗಳನ್ನು ಹೆಚ್ಚಿಸಲು ಸರ್ಕಾರಕ್ಕೆ ಸೂಚಿಸಬೇಕಿತ್ತು.
ಗುಪ್ತಚರ ವಿಭಾಗದ ಮುಖ್ಯಸ್ಥರು ಎಲ್ಲಿ ಇದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಇನ್ನು ಪೊಲೀಸ್ ಮಹಾನಿರ್ದೇಶಕರು ಮತ್ತು ನಗರ ಪೊಲೀಸ್ ಆಯುಕ್ತರ ನಡುವೆ ಹೊಂದಾಣಿಕೆ ಕೊರತೆ ಇದರಲ್ಲಿ ಎದ್ದು ಕಾಣುತ್ತದೆ.  ಇನ್ನು ಮುಂದಾದರೂ ಸರ್ಕಾರ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಪೊಲೀಸರು ಅಸಡ್ಡೆ ವಹಿಸದಂತೆ ಎಚ್ಚರ ವಹಿಸಲು ಕ್ರಮಕೈಗೊಳ್ಳಬೇಕೆಂದು ಗುಪ್ತಚರ ಇಲಾಖೆ ಸೂಚನೆ ಕೊಟ್ಟಿದೆ.

► Follow us on –  Facebook / Twitter  / Google+

Facebook Comments

Sri Raghav

Admin