ಹಿರೀಸಾವೆ ಸಮೀಪ ದೇಶದಲ್ಲೇ 7 ಅಡಿ ಎತ್ತರದ ಅಮೃತಶಿಲೆಶಿರಡಿ ಸಾಯಿಬಾಬಾ ಮೂರ್ತಿ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

sai-ram

ಹಿರೀಸಾವೆ, ಫೆ.13- ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹಿರೀಸಾವೆ ಸಮೀಪ ಚಿಕ್ಕೋನಹಳ್ಳಿಯ ಗೇಟ್ ಸಮೀಪ ನಿರ್ಮಾಣಗೊಂಡಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ದೇಶದಲ್ಲೇ ಎತ್ತರದ 7 ಅಡಿಯ ಅಮೃತಶಿಲೆಯ ಏಕಶಿಲಾ ಶಿರಡಿ ಸಾಯಿಬಾಬಾ ಮೂರ್ತಿ ಸ್ಥಾಪನೆಯಾಗಿದ್ದು ಉತ್ತಮ ಧಾರ್ಮಿಕ ಪುಣ್ಯಕ್ಷೇತ್ರವಾಗಲಿದೆ.ಶಿರಡಿಯ ಕ್ಷೇತ್ರದ ಸಾಯಿಬಾಬಾರವರ ಮೂರ್ತಿ 5.5 ಅಡಿಯಿದ್ದು ದೇಶದ 18 ಕಡೆಗಳಲ್ಲಿ ಸಾಯಿಮಂದಿರ ಸ್ಥಾಪನೆಯಾಗಿದ್ದು ಎಲ್ಲಿಯೂ 7 ಅಡಿಯ ಮೂರ್ತಿ ಇಲ್ಲ.ಈ ಮಂದಿರವನ್ನು ನಿರ್ಮಾಣ ಮಾಡಿದವರು ಇದೇ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಕೊತ್ತನಘಟ್ಟ ಗ್ರಾಮದ ಗುರುಮೂರ್ತಿ ಇವರು ಈ ಕ್ಷೇತ್ರವನ್ನು ಸಾಮಾಜಿಕ ಮತ್ತು ಧಾರ್ಮಿಕವಾಗಿ ಬೆಳೆಸುವ ಉದ್ದೇಶದಿಂದ ಮಂದಿರ ನಿರ್ಮಾಣ ಮಾಡಿದ್ದಾರೆ.
ಗುರುಮೂರ್ತಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ 6ಎಕರೆ ಜಮೀನು ಖರೀದಿಸಿ ಸಾಯಿಬಾಬಾ ಮಂದಿರ ನಿರ್ಮಿಸಿದ್ದು ಜೊತೆಯಲ್ಲೆ ಬಡ ಜನರ ಆರೋಗ್ಯಕ್ಕಾಗಿ 4 ಹಾಸಿಗೆಗಳ ಉಚಿತ ಆರೋಗ್ಯ ಕೇಂದ್ರ ತೆರೆಯಲಾಗುವುದು. ಹಿರಿಯ ಹಾಗೂ ನುರಿತ ವೈದ್ಯರು ಕೆಲಸ ನಿರ್ವಹಿಸಲಿದ್ದಾರೆ. ನಿರ್ಗತಿಕರಿಗೆ ವೃದ್ಧಾಶ್ರಮ ತೆರೆಯಲಾಗುವುದು ಎಂದರು.
ಈ ಮಂದಿರದ ಆವರಣದಲ್ಲಿ ಈಗಾಗಲೇ ಉದ್ಭವ ಶ್ರೀ ಆಂಜನೇಯ ಸ್ವಾಮಿ ಮೂರ್ತಿಯಿದ್ದು , ಇಲ್ಲಿ 7.5 ಅಡಿ ಎತ್ತರದ ಶ್ರೀ ಶನೈಶ್ಚರ ಮೂರ್ತಿ ಸ್ಥಾಪಿಸುವ ಗುರಿ ಇದೆ. ಈ ಜಾಗವನ್ನು ಒಂದು ಆಧ್ಯಾತ್ಮಿಕ ಭಕ್ತಿಯ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಈ ಆವರಣದಲ್ಲಿ ಕಲ್ಯಾಣಿ ಹಾಗೂ ಗೋಶಾಲೆಯನು ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.
ಶ್ರೀ ಸಾಯಿಬಾಬಾರವರ ತತ್ವವನ್ನು ಜನರಿಗೆ ಪ್ರಸಾರ ಮಾಡುವ ಉದ್ದೇಶದಿಂದ ಈಗಾಗಲೇ 108 ಮಂದಿಗೆ ಸಾಯಿಬಾಬಾರವರ ವಿಗ್ರಹಗಳನ್ನು ಉಚಿತವಾಗಿ ನೀಡಲಾಗಿದ್ದು , ಪ್ರತಿ ಪೂರ್ಣಿಮೆಯ ದಿನದಂದು ಬೆಳದಿಂಗಳ ಊಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.ಈ ವರ್ಷ ಸಾಯಿಬಾಬಾರವರು ಇಹಲೋಕ ತ್ಯಜಿಸಿದ 100ನೇ ವರ್ಷವಾದ್ದರಿಂದ ವಿಷೇಶವಾಗಿ ಆಚರಣೆ ಮಾಡಲಾಗುವುದು, ಮುಂದಿನ ಶಿವರಾತ್ರಿ ಅಂಗವಾಗಿ ಇದೇ ಮಾರ್ಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವ ಭಕ್ತರಿಗೆ ರಾತ್ರಿ ವೇಳೆಯಲ್ಲಿ ತಂಗುವ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin