ಹಿಲರಿ ಕ್ಲಿಂಟನ್ ಗೆ 75 ಮಾಜಿ ರಾಯಭಾರಿಗಳ ಬೆಂಬಲ
ವಾಷಿಂಗ್ಟನ್, ಸೆ.23– ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರಿಗೆ ಅಮೆರಿಕದ 75ಕ್ಕೂ ಹೆಚ್ಚು ರಾಯಭಾರಿಗಳು ಮತ್ತು ರಾಜತಾಂತ್ರಿಕರು ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ. ರಿಪಬ್ಲಿಕನ್ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್, ಶ್ವೇತಭವನದ ಮುಂದಿನ ಉತ್ತರಾಧಿಕಾರಿಯಾಗಲು ಸಂಪೂರ್ಣ ಅನರ್ಹರು ಎಂದು ಒಕ್ಕೊರಲಿನಿಂದ ವಾದಿಸಿದ್ದಾರೆ. ಭಯೋತ್ಪಾದನೆ, ನಿರಾಶ್ರಿತರ ಸಮಸ್ಯೆ ಸೇರಿದಂತೆ ಅಮೆರಿಕ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳನ್ನು ಟ್ರಂಪ್ ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಹಾಗೂ ಈ ವಿಷಯದಲ್ಲಿ ಅವರು ಯಾವುದೇ ಆಸಕ್ತಿ ತೋರುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ. ಇದರಿಂದ 70 ವರ್ಷದ ಟೆಲಿವಿಷನ್ ರಿಯಾಲಿಟಿ ಶೋ ಸ್ಟಾರ್ ಟ್ರಂಪ್ಗೆ ಭಾರೀ ಹಿನ್ನಡೆಯಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷ ಮತ್ತು ಕಮಾಂಡರ್ ಇನ್ ಚೀಫ್ ಆಗಲು ಸಂಪೂರ್ಣ ಅನರ್ಹರು ಎಂದು 75ಕ್ಕೂ ಹೆಚ್ಚು ಗಣ್ಯರು ವಾದಿಸಿದ್ದಾರೆ. ಭಾರತಕ್ಕೆ ಅಮೆರಿಕದ ರಾಯಭಾರಿಗಳಾಗಿದ್ದ ಥಾಮಸ್ ಪಿಕೆರಿಂಗ್, ನ್ಯಾನ್ಸಿ ಪೊವೆಲ್ ಹಾಗೂ ವಿಂಡಿ ಚೆಂಬರ್ಲಿನ್, ರಯಾನ್ ಕೊರ್ಕರ್, ಜೇಮ್ಸ್ ಬಿ ಕನ್ನಿಂಗ್ಹ್ಯಾಂ, ನಿಕೋಲಸ್ ಪ್ಲಾಟ್, ಥಾಮಸ್ ರಾಬರ್ಟ್ಸನ್ ಮೊದಲಾದವರು ಟ್ರಂಪ್ ನಾಲಾಯಕ್ಕು ಎಂಬ ಸ್ಪಷ್ಟ ನಿಲುವು ಹೊಂದಿದ್ದು, ಇದು ಹಿಲರಿ ಕ್ಲಿಂಟನ್ ಪರ ಭಾರೀ ಬೆಂಬಲಕ್ಕೆ ಹಾದಿ ಸುಗಮ ಮಾಡಿಕೊಟ್ಟಿದೆ.
► Follow us on – Facebook / Twitter / Google+