ಹುಚ್ಚ ವೆಂಕಟ್‍ನ ಹೊಸ ವರಸೆ

ಈ ಸುದ್ದಿಯನ್ನು ಶೇರ್ ಮಾಡಿ

UCHA

ಕಳೆದ ಬಾರಿ ಬಿಗ್‍ಬಾಸ್ ಮನೆಯ ಸದಸ್ಯರಾಗಿದ್ದ ಹುಚ್ಚ ವೆಂಕಟ್ ಕೆಲವೇ ದಿನಗಳಲ್ಲಿ ರಾದ್ದಾಂತ ಮಾಡಿಕೊಂಡು ಅಲ್ಲಿಂದ ಹೊರಬಂದಿದ್ದರು. ಸಧ್ಯದಲ್ಲೇ ಆರಂಭವಾಗಲಿರುವ ಬಿಗ್‍ಬಾಸ್ ಸೀಜನ್-4 ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಬಾರಿ ಕೂಡ ನನಗೆ ಆಹ್ವಾನ ಬಂದಿದೆ ಎಂದು ಹುಚ್ಚ ವೆಂಕಟ್ ಮೊನ್ನೆ ನಡೆದ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಹೇಳಿದರು. ಆದರೆ ಅವರು ಕಾರ್ಯಕ್ರಮದ ಸ್ಪರ್ಧಿಯಾಗಿರದೆ, ಪ್ರತಿ ದಿನದ ಕಂತುಗಳನ್ನು ವೀಕ್ಷಿಸಿ ಅದಕ್ಕೆ ಸೂಕ್ತವಾದ ವಿಮರ್ಶೆ, ಸಮರ್ಥನೆ ಹಾಗೂ ಅಭಿಪ್ರಾಯಗಳನ್ನು ನೀಡುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಗಿದೆಯಂತೆ.

ಆದರೆ ಸಂಭಾವನೆಯ ವಿಚಾರದಲ್ಲಿ ಇನ್ನೂ ಮಾತುಕತೆ ನಡೆಯುತ್ತಿದ್ದು, ಸಧ್ಯದಲ್ಲೇ ಸರಿಹೋಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಕುಟುಂಬವರ್ಗ ಹಾಗೂ ಮಾದ್ಯಮದ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ವೆಂಕಟ್, ಪೊರ್ಕಿ ಹುಚ್ಚ ವೆಂಕಟ್ ಚಿತ್ರದ ಬಗ್ಗೆ ಮಾತನಾಡುತ್ತ ಅಕ್ಟೋಬರ್‍ನಲ್ಲಿ ಚಿತ್ರದ ಉಳಿದಭಾಗದ ಶೂಟಿಂಗ್ ಮುಗಿಸಿ, ನಂತರ ತಿಕ್ಲ ವೆಂಕಟ್ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಪತ್ರಕರ್ತರಿಗೂ ಮುಖ್ಯವಾದ ಪಾತ್ರವನ್ನು ವೆಂಕಟ್ ಸೃಷ್ಟಿ ಮಾಡಿದ್ದಾರಂತೆ.  ನಾನು ಚಿತ್ರವನ್ನು ನನ್ನ ಆತ್ಮ ತೃಪ್ತಿಗಾಗಿ ಮಾಡುತ್ತೇನೆ. ಅದು ಬಿಟ್ಟು ಬೇರಯವರ ಇಷ್ಟಕ್ಕೆ ಮಾಡಿದರೆ ಅದು ಸರಿಹೋಗುವುದಿಲ್ಲ. ತಿಕ್ಲ, ಹುಚ್ಚ ಪದಕ್ಕೆ ಅರ್ಥವನ್ನು ಅವರವರ ಭಾವಕ್ಕೆ ಬಿಡಲಾಗಿದೆ. ಅರ್ಥವನ್ನು ಒಳ್ಳೆಯದಾಗಿಯಾದರೂ ತೆಗೆದುಕೊಳ್ಲಬಹುದು ಅಥವಾ ನಕರಾತ್ಮಕವಾಗಿಯಾದರೂ ತೆಗೆದುಕೊಳ್ಳಬಹುದು. ನನ್ನ ಪ್ರತಿ ಸಿನಿಮಾದಲ್ಲೂ ಒಂದು ಸಂದೇಶವನ್ನು ಹೇಳುವ ಪ್ರಯತ್ನ ಮಾಡುತ್ತೇನೆ. ಚಿತ್ರಮಂದಿರದಿಂದ ಹೊರಬರುವಾಗ ಪ್ರೇಕ್ಷಕರಿಗೆ ಇದೇ ಸರಿಯಾದ ಹೆಸರು ಎಂದು ಗೊತ್ತಾಗುತ್ತದೆ ಎಂದು ತಮ್ಮ ಹೊಸಚಿತ್ರದ ಶೀರ್ಷಿಕೆಯ ಬಗ್ಗೆ ಸ್ಟಷ್ಟನೆ ನೀಡಿದರು.
ನಂತರ ಕಾವೇರಿ ಸಮಸ್ಯೆ ಬಗ್ಗೆ ಮಾತನಾಡುತ್ತ ಕಾವೇರಿ ಹುಟ್ಟಿರೋದು ನಮ್ಮ ನಾಡಲ್ಲಿ ಹಾಗೂ ನಮಗೋಸ್ಕರ. ಅಲ್ಲಿನ ರೈತರನ್ನು ಬೆಳೆಸಲು ನಮ್ಮ ರೈತರಿಗೆ ವಿಷ ಕೊಡುವುದು ಸರಿಯಲ್ಲ. ಜನರೊಂದಿಗೆ ಯುದ್ದ ಮಾಡುವುದು ತರವಲ್ಲ. ಸರ್ಕಾರದ ವಿರುದ್ದ ಹೋರಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಈ ಚಿತ್ರದಲ್ಲೂ ಸಂಗಿತ, ಛಾಯಗ್ರಹಣ ಹೊರತುಪಡಿಸಿ ಎಲ್ಲಾ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಸೌಮ್ಯ ಪೂರ್ಕಿ ಹುಚ್ಚ ವೆಂಕಟ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂದು ಅವರನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಅಂಧ ವಿದ್ಯಾರ್ಥಿಗಳಿಗೆ ಹುಚ್ಚ ವೆಂಕಟ್ ಸೇನೆಯಿಂದ ಸಹಾಯ ಮಾಡಲಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin