ಹುಟ್ಟುತ್ತಲೇ ‘ಲಕ್ಷ್ಮಿ’ಯನ್ನು ಕರೆತಂದ ಐವರು ಧನಲಕ್ಷ್ಮಿಯರು..!

ಈ ಸುದ್ದಿಯನ್ನು ಶೇರ್ ಮಾಡಿ

Babi

ಬೆಂಗಳೂರು,ಜ.1- ಹೊಸವರ್ಷದಂದು ಐವರು ಹೆಣ್ಣು ಮಕ್ಕಳು ಜನಿಸುವ ಮೂಲಕ ಹುಟ್ಟುತ್ತಲೇ ಪೋಷಕರಿಗೆ ಧನಲಕ್ಷ್ಮಿಯರಾಗಿದ್ದಾರೆ! ಸರ್ಕಾರ ಇಂದು ಹುಟ್ಟುವ ಹೆಣ್ಣು ಮಕ್ಕಳಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಅದರಂತೆ ಬಿಬಿಎಂಪಿಯ 24 ಆಸ್ಪತೆಗಳಲ್ಲಿ ಈವರೆಗೆ ಐವರು ಹೆಣ್ಣುಮಕ್ಕಳು ಜನಿಸುವ ಮೂಲಕ ಪೋಷಕರ ಪಾಲಿಗೆ ಐಶ್ವರ್ಯ ಲಕ್ಷ್ಮಿಯರೆನಿಸಿದ್ದಾರೆ.

ಗಂಗಾನಗರ ಹೆರಿಗೆ ಆಸ್ಪತ್ರೆಯಲ್ಲಿ ಕಮಲಾನಗರ ನಿವಾಸಿ ಆಶಾ ಮತ್ತು ಉದಯ ಕುಮಾರ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಚಾಲಕರಾಗಿರುವ ಉದಯ್ ಕುಮಾರ್, ಆಶಾ ದಂಪತಿಗೆ ಎರಡನೇ ಮಗುವಾಗಿ ಇಂದು ಹುಟ್ಟಿದ ಮಗು ಧನ ಲಕ್ಷ್ಮಿಯನ್ನೇ ಮನೆಗೆ ಕರೆತಂದಿದ್ದಾಳೆ.

ಸರ್ಕಾರದ ಬಹುಮಾನಕ್ಕೆ ಪಾತ್ರವಾದ ಮೊದಲ ಮಗು ಇದಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ. ಈವರೆಗೆ ಬಿಬಿಎಂಪಿಯ ಇತರೆ ಆಸ್ಪತ್ರೆಗಳಲ್ಲಿ ಒಟ್ಟು ಐದು ಮಗು ಜನಿಸಿ, ಬಹುಮಾನಕ್ಕೆ ಪಾತ್ರವಾಗಿವೆ.

ಇಂದು ರಾತ್ರಿ 12 ಗಂಟೆಯವರೆಗೆ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹುಟ್ಟುವ ಹೆಣ್ಣು ಮಕ್ಕಳು ಈ ಬಹುಮಾನಕ್ಕೆ ಅರ್ಹರಾಗಿರುತ್ತಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ