ಹುಟ್ಟುಹಬ್ಬದಂದು ಬಡ-ಬಗ್ಗರಿಗೆ ದಾನ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

ದಾಬಸ್‍ಪೇಟೆ, ಫೆ.5- ಈ ಭರತಖಂಡದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಜನನ ಅನ್ನುವುದು ಪುಣ್ಯವಾದದ್ದು. ಹುಟ್ಟಿದ ಮೇಲೆ ದೇಶಕ್ಕೆ ನಾವು ಏನನ್ನಾದರೂ ಸಾಧನೆ ಮಾಡಬೇಕೆಂದು ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.ಶಿವಗಂಗೆಯಲ್ಲಿ ನಡೆದ ಶಿವಗಂಗಾ ಪಧವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಇಂದು ಪಾಶ್ಚಾತ್ಯ ಸಂಸ್ಕೃತಿ  ಎಲ್ಲರೂ ಅನುಕರಿಸುತ್ತಿದ್ದು ನಮ್ಮ ಭಾರತದ ಆಚಾರ ಪರಂಪರೆ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ನಾವು ಶಿಕ್ಷಣದ ನಮ್ಮ ಭಾರತದ ಇಂದಿನ ಆಚಾರಗಳ ಬಗ್ಗೆ ತಿಳಿಸುವ ಕೆಲಸವಾಗಬೇಕಿದೆ ಎಂದರು.ಯಾವಾಗಲಾದರೂ ಹುಟ್ಟುಹಬ್ಬ ಆಚರಣೆ ಮಾಡಬೇಕಾದರೆ ಬಡಬಗ್ಗರಿಗೆ ತಮ್ಮ ಸೇವೆಯನ್ನು ಹಾಗೂ ಇರುವುದನ್ನು ಕೊಟ್ಟು ಅದನ್ನು ಸಂತೋಷ ಕಾಣಬೇಕು ಎಂದರು.
ಆಡಳಿತಾದಿಕಾರಿ ಸುರೇಶ್ ಮಾತನಾಡಿ, ನಮ್ಮಸಂಸ್ಕೃತಿ  ವಿಶ್ವ ಮಟ್ಟದಲ್ಲಿ ಪರಿಚಯವಾಗುತ್ತಿದೆ. ಯೋಗವನ್ನು ಇಡೀ ವಿಶ್ವವೇ ಹೊಗಳುತ್ತಿದೆ. ಇಂದು ಶಿಕ್ಷಣ ಅಂಕಗಳಿಗೆ ಸೀಮಿತವಾಗದೇ ನೈತಿಕ ಮೌಲ್ಯದಂತಹ ಶಿಕ್ಷಣವಾಗಿರಬೇಕು. ಮಾತುಗಾರಿಕೆ ಕೇಳುವ ಶಕ್ತಿ ನೈತಿಕ ಶಿಕ್ಷಣದ ಮೌಲ್ಯಗಳಾಗಿವೆ. ನಂಬಿಕೆ ಇಂದು ಮನುಷ್ಯನಿಗೆ ತುಂಬಾ ಅಶ್ಯಕವಾಗಿ ಪ್ರತಿಯೊಬ್ಬರಿಗೂ ಬೇಕಾಗಿದೆ. ಸ್ವಾಮಿ ವಿವೇಕಾನಂದರು ನಂಬಿಕೆ ಬಗ್ಗೆ ಹೇಳುತ್ತಾ ದೇವರನ್ನು ನಂಬುವ ಮೊದಲು ನೀನಿ ನಿನ್ನನ್ನು ನಂಬು ಎಂದು ಹೇಳಿದ್ದರು ಎಂದು ವಿಷಾದಿಸಿದರು.
ವಕೀಲ ವಸಂತ್, ಪ್ರಾಂಶುಪಾಲರಾದ ಸರ್ವಮಂಗಳ, ಇಂಮ್ರಾನ್ ಖಾನ್, ಪ್ರೌಡಶಾಲಾ ಮುಖ್ಯೋಪಾದ್ಯಾಯ ಸಿದ್ದರಾಜು, ಶಿಕ್ಷಕರಾದ ರಮೇಶ್, ರಾಜ್‍ಕುಮಾರ್, ಗಂಗಣ್ಣ, ಯೋಗೇಶ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin