ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್

ಈ ಸುದ್ದಿಯನ್ನು ಶೇರ್ ಮಾಡಿ

Manoranjan-1
ಬೆಂಗಳೂರು, ಡಿ.11- ಕನಸುಗಾರ ರವಿಚಂದ್ರನ್ ಅವರ ಪುತ್ರ ಸ್ಯಾಂಡಲ್‍ವುಡ್ ಪ್ರಿನ್ಸ್ ಮನೋರಂಜನ್ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ರಾಜಾಜಿನಗರದ ತಮ್ಮ ಮನೆಯಲ್ಲಿ ಕುಟುಂಬ ವರ್ಗ , ಆತ್ಮೀಯರು, ಹಿತೈಷಿಗಳು, ಚಿತ್ರರಂಗದ ಸ್ನೇಹಿತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಮನೋರಂಜನ್ ಹುಟ್ಟುಹಬ್ಬ ಆಚರಿಸಿಕೊಂಡರು.
ತಂದೆಯೊಂದಿಗೆ ತೆರೆಯ ಹಿಂದೆ ಕ್ರೇಜಿಸ್ಟಾರ್, ಅಪೂರ್ವದಂತಹ ಚಿತ್ರಗಳಲ್ಲಿ ರವಿಚಂದ್ರನ್ ಅವರ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿರುವ ಮನೋರಂಜನ್ ಕಂಠಿ ಚಿತ್ರ ನಿರ್ದೇಶಕ ಭರತ್ ನಿರ್ದೇಶನದಲ್ಲಿ ಸಾಹೇಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದು, ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಸದ್ಯದಲ್ಲೇ ತೆರೆಮೇಲೆ ಮಿಂಚಲು ಮುಂದಾಗಿದ್ದಾರೆ.

Manoranjan-2

ಇದಲ್ಲದೆ ರಾಕ್‍ಲೈನ್ ವೆಂಕಟೇಶ್ ನಿರ್ಮಿಸಿ, ನಂದಕಿಶೋರ್ ನಿರ್ದೇಶಿಸುತ್ತಿರುವ ಮತ್ತೊಂದು ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಲು ಹಲವಾರು ರೀತಿಯಲ್ಲಿ ಸಿದ್ಧತೆ ನಡೆಸಿರುವ ಮನೋರಂಜನ್ ಚನ್ನೈನಲ್ಲಿ ತರಬೇತಿ ಪಡೆದಿದ್ದಾರೆ. ಫೈಟ್, ಡ್ಯಾನ್ಸ್ ಹಾಗೂ ಹಾರ್ಸ್ ರೈಡಿಂಗ್‍ನಂತಹ ಎಲ್ಲಾ ತರಬೇತಿಯೊಂದಿಗೆ ಚಿತ್ರ ನಿರ್ಮಾಣ ಹಾಗೂ ನಂತರದಲ್ಲಿ ತಾಂತ್ರಿಕವಾಗಿ ಕೈಗೊಳ್ಳಬೇಕಾದ ಕೆಲಸಗಳಲ್ಲಿ ನೈಪುಣ್ಯತೆಯನ್ನು ಸಾಧಿಸಿದ್ದು, ತಂದೆಯ ಹಾದಿಯಲ್ಲೇ ಸಾಗಿದ್ದಾರೆ. ಇಂದು ಮನೆಯಲ್ಲಿ ನಡೆದ ಸಮಾರಂಭದಲ್ಲಿ ತಂದೆ ರವಿಚಂದ್ರನ್, ತಾಯಿ ಸುಮತಿ, ಸಹೋದರ ವಿಕ್ಕಿ, ಸಹೋದರಿ ಗೀತಾಂಜಲಿಯೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಚಿತ್ರೋದ್ಯಮದ ಗೆಳೆಯರು ಹಾಗೂ ಅಭಿಮಾನಿ ಬಳಗ ಹುಟ್ಟುಹಬ್ಬದ ಶುಭ ಹಾರೈಸಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Manoranjan-3

Facebook Comments

Sri Raghav

Admin