ಹುಟ್ಟುಹಬ್ಬ ಆಚರಿಸಿಕೊಂಡ ರಾಘವೇಂದ್ರ ರಾಜ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Raghavendrea

ಬೆಂಗಳೂರು, ಆ.15-ನಟ, ನಿರ್ಮಾಪಕ ರಾಘವೇಂದ್ರ ರಾಜ್‍ಕುಮಾರ್ ಅವರು ತಮ್ಮ 51ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬದವರ ಜತೆ ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡರು.  1988ರಲ್ಲಿ ಚಿರಂಜೀವಿ ಸುಧಾಕರ ಎಂಬ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಘವೇಂದ್ರ ರಾಜ್‍ಕುಮಾರ್ ನಂತರ ನಂಜುಂಡಿ ಕಲ್ಯಾಣ ಚಿತ್ರದಿಂದ ಹೊಸ ದಾಖಲೆಯನ್ನು ಸೃಷ್ಟಿಸಿತ್ತು.  ಗಜಪತಿ ಗರ್ವಭಂಗ, ಅನುಕೂಲಕ್ಕೊಬ್ಬ ಗಂಡ, ಕಲ್ಯಾಣ ಮಂಟಪ, ಸ್ವಸ್ತಿಕ್, ಪಕ್ಕದ್ಮನೆ ಹುಡುಗಿ, ಅನುರಾಗದ ಅಲೆಗಳು, ಟುವ್ವಿ ಟುವ್ವಿಯಂತಹ ಹಲವಾರು ಹಿಟ್ ಚಿತ್ರಗಳ ಸರಮಾಲೆಯನ್ನೇ ನೀಡಿದ್ದರು. ಕಲಾವಿದನಾಗಿ, ನಿರ್ಮಾಪಕನಾಗಿ, ಗಾಯಕ ನಾಗಿರುವ ರಾಘವೇಂದ್ರ ರಾಜ್‍ಕುಮಾರ್, 1974ರಲ್ಲಿ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಬಾಲ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ರಾಘವೇಂದ್ರ ರಾಜ್‍ಕುಮಾರ್ ಪತ್ನಿ, ಪುತ್ರ, ಸಂಬಂಧಿಕರು, ಸ್ನೇಹಿತರು, ಅಭಿಮಾನಿಗಳ ನಡುವೆ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin