ಹುಟ್ಟೂರು ಹಂಡಿಗುಂದ ಗ್ರಾಮ ತಲುಪಿದ ಯಲ್ಲಪ್ಪ ಹಂಡಿಭಾಗ್ ಪಾರ್ಥೀವ ಶರೀರ

ಈ ಸುದ್ದಿಯನ್ನು ಶೇರ್ ಮಾಡಿ

Yallappa-Handibhagh
ಬೆಳಗಾವಿ,ಅ.28-ನಿನ್ನೆ ಆತ್ಮಹತ್ಯೆಗೆ ಶರಣಾಗಿರುವ ಚಿಕ್ಕಮಗಳೂರು ಡಿವೈಎಸ್ಪಿ ದಿವಂಗತ ಕಲ್ಲಪ್ಪ ಹಂಡಿಭಾಗ್ ಅವರ ಸೋದರ ಕಾನ್ಸ್ಟೇಬಲ್ ಯಲ್ಲಪ್ಪ ಹಂಡಿಭಾಗ್ ಅವರ ಮರಣೋತ್ತರ ಪರೀಕ್ಷೆ ಮುಗಿದಿದ್ದು , ಪಾರ್ಥೀವ ಶರೀರವನ್ನು ಅವರ ಹುಟ್ಟೂರಾದ ರಾಯಭಾಗ ತಾಲ್ಲೂಕಿನ ಹಂಡಿಗುಂದ ಗ್ರಾಮಕ್ಕೆ ಕೊಂಡೊಯ್ಯಲಾಗಿದೆ.  ಗೋಕಾಕ್ ತಾಲ್ಲೂಕು ಆಸ್ಪತ್ರೆಯಲ್ಲಿ ಯಲ್ಲಪ್ಪನ ಶವದ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಆಸ್ಪತ್ರೆ ಆವರಣದಲ್ಲಿ ಅವರ ತಂದೆ ಬಸಪ್ಪ ಕುಸಿದು ಬಿದ್ದರು. ಅಪಾರ ಸಂಖ್ಯೆಯಲ್ಲಿ ಬಂದಿದ್ದ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಇತ್ತೀಚಗಷ್ಟೇ ತಮ್ಮ ಹಿರಿಯ ಮಗ ಕಲ್ಲಪ್ಪ ಹಂಡಿಭಾಗ್ ಅವರನ್ನು ಕಳೆದುಕೊಂಡು ಜರ್ಜಿತರಾಗಿದ್ದ ಈ ಕುಟುಂಬಕ್ಕೆ ಮತ್ತೊಬ್ಬ ಮಗನ ಸಾವು ಬರ ಸಿಡಿಲಿನಂತಾಗಿತ್ತು. ಯಲ್ಲಪ್ಪ ಹಂಡಿಭಾಗ್ ಡೆತ್ನೋಟ್ ಬರೆದಿಟ್ಟು ,ಗೋಕಾಕ್ ತಾಲ್ಲೂಕಿನ ಕುಲಗೋಡ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. [ ಇದನ್ನೂ ಓದಿ : ಆತ್ಮಹತ್ಯೆಗೆ ಶರಣಾದ ಡಿ.ವೈ.ಎಸ್.ಪಿ ಕಲ್ಲಪ್ಪ ಹಂಡಿಭಾಗ್ ಸಹೋದರ ಆತ್ಮಹತ್ಯೆ ]

Yallappa-Handibhagh-1

ತಾಯಿ ನನ್ನನ್ನು ಕ್ಷಮಿಸು, ಅಕ್ಕ ನನ್ನನ್ನು ಕ್ಷಮಿಸು ಇದು ನಿಮ್ಮ ಕಾಲಿಗೆ ನನ್ನ ಕೊನೆಯ ನಮಸ್ಕಾರಗಳು ಎಂದು ಡೆತ್ನೋಟ್ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.  ಸ್ಥಳಕ್ಕೆ ಉತ್ತರ ವಲಯ ಐಜಿಪಿ ರಾಮಚಂದ್ರ ರಾವ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಯಲ್ಲಪ್ಪ ಅವರ ತಂದೆ ಯಾವ ರೀತಿ ದೂರು ನೀಡುತ್ತಾರೆ ಅದರ ಮೇಲೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.  ಯಲ್ಲಪ್ಪ ಅವರ ಅಂತ್ಯಸಂಸ್ಕಾರವನ್ನು ಇಂದು ಸ್ವಗ್ರಾಮದಲ್ಲಿ ನೆರವೇರಲಿದೆ.

Yallappa-Handibhagh-5

Yallappa-Handibhagh-3

Yallappa-Handibhagh-4

► Follow us on –  Facebook / Twitter  / Google+

Yallappa-Handibhag

Facebook Comments

Sri Raghav

Admin