‘ಹುಣಸೂರಿನಲ್ಲಿ ನಡೆದ ಘಟನೆಗೆ ಎಸ್‍ಪಿ ರವಿ ಚನ್ನಣ್ಣನವರ್ ಕಾರಣ’

ಈ ಸುದ್ದಿಯನ್ನು ಶೇರ್ ಮಾಡಿ

Pratap-Simha--02

ಮೈಸೂರು ,ಡಿ.4-ಹುಣಸೂರಿನಲ್ಲಿ ನಿನ್ನೆ ನಡೆದಿರುವ ಘಟನೆಗೆ ಜಿಲ್ಲಾಡಳಿತ ಹಾಗೂ ಎಸ್‍ಪಿ ರವಿ.ಡಿ ಚನ್ನಣ್ಣನವರ್ ಅವರೇ ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಇಂದಿಲ್ಲಿ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ಹಾಗೂ ನನಗೆ ಎಸ್‍ಪಿಯವರು ವಿಭಿನ್ನ ಮಾಹಿತಿ ನೀಡಿದ್ದರಿಂದ ಈ ಗೊಂದಲ ಉಂಟಾಗಿದೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಶನಿವಾರದವರೆಗೂ ನೀವು ಹೇಳಿದ ಮಾರ್ಗದಲ್ಲೇ ಮೆರವಣಿಗೆ ನಡೆಸಲು ಅವಕಾಶ ಕಲ್ಪಿಸುವುದಾಗಿ ಹೇಳಿದ್ದ ಎಸ್‍ಪಿ ಅವರು ನಿನ್ನೆ ಬೆಳಗ್ಗೆ ಮೆರವಣಿಗೆಗೆ ಹೋಗುವ ಸಂದರ್ಭದಲ್ಲಿ ನಮ್ಮನ್ನು ತಡೆದು ಮಾರ್ಗ ಬದಲಾವಣೆ ಬಗ್ಗೆ ತಿಳಿಸಿದರು. ಅಲ್ಲದೆ ನಮ್ಮ ಮೆರವಣಿಗೆಗೂ ತಡೆಯೊಡ್ಡಿದ್ದರು. ನನಗೆ ವೈಯಕ್ತಿಕವಾಗಿ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡರು. ಹಾಗಾಗಿ ಕಾರು ಚಲಾಯಿಸಿಕೊಂಡು ಹೋದೆ. ಇದರಿಂದ ಯಾರಿಗೂ ತೊಂದರೆಯಾಗಿಲ್ಲ ಎಂದು ವಿವರಿಸಿದರು.
ಆದರೆ ನಂತರ ನನ್ನನ್ನು ಬಂಧಿಸಿ ದೂರು ದಾಖಲಿಸಿದ್ದಾರೆ.

ಇದೆಲ್ಲವನ್ನು ರವಿ ಚನ್ನಣ್ಣನವರು ಸರ್ಕಾರದ ಅಣತಿಯಂತೆ ಮಾಡಿ ಸ್ವಾಮಿ ನಿಷ್ಠೆ ತೋರಿದ್ದಾರೆ ಎಂದು ಹೇಳಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪೊಲೀಸರಿಗೆ ಗೌರವ ನೀಡುವುದು ನಮಗೂ ತಿಳಿದಿದೆ. ಆದರೆ ಅವರು ಈ ರೀತಿ ನನ್ನ ವಿರುದ್ಧ ನಡೆದುಕೊಂಡಿದ್ದರಿಂದ ಈ ಘಟನೆ ನಡೆದಿದೆ. ಮುಖ್ಯಮಂತ್ರಿಗಳು ಹಾಗೂ ಪೊಲೀಸರಿಗೆ ಗೌರವ ಕೊಡುವುದನ್ನು ನಾನು ಇವರಿಂದ ಕಲಿಯಬೇಕಿಲ್ಲ. ಮೊದಲು ಸಿಎಂ ಇದನ್ನು ಕಲಿಯಲಿ. ಕೊಪ್ಪಳದಲ್ಲಿ ಪೊಲೀಸರಿಗೆ ಯಾವ ರೀತಿ ಗೌರವ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

Facebook Comments

Sri Raghav

Admin