ಹುತಾತ್ಮ ಯೋಧನ ಮೃತದೇಹ ಸ್ವಗ್ರಾಮಕ್ಕೆ ತರಲು ವಿಳಂಬ, ಕುಟುಂಬಸ್ಥರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Gangadhar--01

ಚಿಕ್ಕಬಳ್ಳಾಪುರ, ಜೂ. 24-ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‍ನಲ್ಲಿ ಹುತಾತ್ಮರಾದ ಬಿಎಸ್‍ಎಫ್ ಯೋಧ ಗಂಗಾಧರ್ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ವಿಳಂಬ ಮಾಡಿದ್ದಕ್ಕೆ ಕುಟುಂಬ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ವೀರಪ್ಪ ಮೊಯ್ಲಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.  ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಯೋಧನ ತಾಯಿ, ತಮ್ಮ ಮಗನ ಸಾವಿನ ಬಗ್ಗೆ ಅಧಿಕಾರಿಗಳು ಏನು ಮಾಹಿತಿ ನೀಡಲಿಲ್ಲ. ಹಿಂಸಾಚಾರದ ವೇಳೆ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಅವರು ಸಾವನ್ನಪ್ಪಿ ನಾಲ್ಕು ದಿನವಾದರೂ ಸ್ವಗ್ರಾಮಕ್ಕೆ ತರಲು ಅಧಿಕಾರಿಗಳು ಸೇರಿದಂತೆ ಶಾಸಕರು, ಸಂಸದರು ಏನು ಕ್ರಮಕೈಗೊಳ್ಳಲಿಲ್ಲ. ರಾಜಕಾರಣಿಗಳು ಮೃತಪಟ್ಟರೆ ಸುಮ್ಮನಿರುವಿರಾ.. ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಇಬ್ಬರು ಗಂಡು ಮಕ್ಕಳನ್ನು ಸೇನೆಗೆ ಕಳಿಸಿದ್ದೇನೆ. ಆದರೆ ನಿಮ್ಮ ಮಕ್ಕಳನ್ನು ಸೇನೆಗೆ ಕಳುಹಿಸಿದ್ದೀರಾ? ನಮ್ಮಂತಹ ಬಡವರಿಗೆ ಈ ರೀತಿ ಏಕೆ ಅನ್ಯಾಯ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಸಂಸದ ವೀರಪ್ಪ ಮೊಯ್ಲಿ ಇದಕ್ಕೆ ಪ್ರತಿಕ್ರಿಯಿಸಿ, ಲೋಕಸಭೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದು ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin