ಹುಲಿ ಸಂರಕ್ಷಣಾ ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Tiger-CM

ಬೆಂಗಳೂರು, ಏ.19- ಹುಲಿ ಸಂರಕ್ಷಣಾ ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.  ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಇಡೀ ವರ್ಷ ವನ್ಯಜೀವಿಗಳ ವರ್ಷಾಚರಣೆ ನಡೆಯಲಿದೆ.  ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ರಮಾನಾಥರೈ, ಸಚಿವ ಪ್ರಿಯಾಂಕ್ ಖರ್ಗೆ, ನಟಿ ಭಾವನಾ ಹಾಗೂ ಹುಲಿ ಸಂರಕ್ಷಣಾ ಅಭಿಯಾನದ ರಾಯಭಾರಿಯಾಗಿರುವ ನಟ ಪ್ರಕಾಶ್‍ರೈ ಹಾಜರಿದ್ದರು.  ಈ ವೇಳೆ ಪ್ರಕಾಶ್‍ರೈ ಮಾತನಾಡಿ, ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಶುರುವಾಗಿದೆ. ಆಹಾರ, ನೀರು ಅರಸುತ್ತಾ ಪ್ರಾಣಿಗಳು ನಾಡಿಗೆ ಬರುತ್ತಿವೆ. ಈ ವೇಳೆ ಸಂಘರ್ಷಗಳಾಗದಂತೆ ಜನರಿಗೆ ಅರಿವು ಮೂಡಿಸಬೇಕಿದೆ ಎಂದು ಮನವಿ ಮಾಡಿದರು.ಪ್ರಕೃತಿಯನ್ನು ನಾವು ಕಾಪಾಡುತ್ತೇವೆ ಎಂಬ ಅಹಂಭಾವ ಬೇಡ. ಪ್ರಕೃತಿ ತನ್ನ ಕೆಲಸವನ್ನು ಮಾಡುತ್ತದೆ, ನಾವು ಯಾವುದನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.  ಮೂರು ತಿಂಗಳ ಈ ಅಭಿಯಾನ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏನಮ್ಮಾ ಪತ್ತೆನೇ ಇಲ್ಲ:

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಭಾವನಾರನ್ನು ಮಾತನಾಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಏನಮ್ಮಾ…. ಪತ್ತೇನೇ ಇಲ್ಲ. ಗುಂಡ್ಲುಪೇಟೆ-ನಂಜನಗೂಡು ಉಪಚುನಾವಣೆ ಕ್ಯಾಂಪೆನ್‍ನಲ್ಲಿ ನಿಮ್ಮನ್ನ ನೋಡ್ಲೇ ಇಲ್ಲ ಎಂದರು.  ಇದಕ್ಕೆ ಭಾವನಾ ಪ್ರತಿಕ್ರಿಯಿಸಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೆ ಸಾರ್ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin