ಹುಳಿಯಾರಿನಿಂದ 15 ಮಂದಿ ಹಜ್ ಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

hiriyaru

ಹುಳಿಯಾರು, ಆ.27- ಈ ವರ್ಷ ದಾಖಲೆಯ ಪ್ರಮಾಣದಲ್ಲಿ ಪಟ್ಟಣದಿಂದ ಹಜ್ ಯಾತ್ರೆ ಕೈಗೊಂಡಿದ್ದಾರೆ ಎಂದು ಮದೀನ ಮಸೀದಿ ಮುತುವಲ್ಲಿ ಸೈಯದ್ ಜಬೀವುಲ್ಲ ತಿಳಿಸಿದರು.ಪಟ್ಟಣದ ಶಾದಿಮಹಲ್‍ನಲ್ಲಿ ಏರ್ಪಡಿಸಿದ್ದ ಹಜ್ ಯಾತ್ರಿಗಳು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಪ್ರತಿವರ್ಷ ಹಜ್ ಯಾತ್ರಿಗಳನ್ನು ಕಳುಹಿಸಿಕೊಡಲಾಗುತ್ತಿದೆ. ಯಾತ್ರಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಹುಳಿಯಾರಿನವರ ಅದೃಷ್ಟವೋ ಏನೋ ಈ ವರ್ಷ 11 ಮಂದಿ ರಾಜ್ಯ ಸರ್ಕಾರದಿಂದ, ಉಳಿದವರು ಕೇಂದ್ರ ಸರ್ಕಾರದಿಂದ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ, ಹಜ್‍ಯಾತ್ರೆ ಕೈಗೊಳ್ಳುವುದು ಮುಸ್ಲಿಮರ ಜೀವಿತಾವಧಿ ಕನಸು. ಸಾವಿರಾರು ಕಿಮೀ ಸರಿಯಾದ ನಿದ್ರಾಹಾರವಿಲ್ಲದೆ ಉಪವಾಸ, ವನವಾಸ ಪಟ್ಟು ಯಾತ್ರೆ ಪೂರೈಸುತ್ತಾರೆ. ಸತ್ಕರ್ಮದಾಯಕವಾದ ಈ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬರಲಿ ಎಂದು ಶುಭ ಹಾರೈಸಿದರು.  ತಾಪಂ ಸದಸ್ಯ ಎಚ್.ಎನ್.ಕುಮಾರ್ ಮಾತನಾಡಿದರು. ಹಜ್ ಯಾತ್ರಿಗಳಾದ ಸೈಯದ್ ಜಬೀವುಲ್ಲಾ, ಸೈಫುಲ್ಲಾ, ಸೈಯದ್‍ಮುನೀರ್, ಜಬೀನ್‍ತಾಜ್ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್, ಉಪಧ್ಯಕ್ಷ ಗಣೇಶ್, ಗ್ರಾಪಂ ಸದಸ್ಯರಾದ ಧನುಷ್ ರಂಗನಾಥ್, ಡಿಶ್‍ಬಾಬು, ಎಸ್‍ಆರ್‍ಎಸ್ ದಯಾನಂದ್, ಗೀತಾ ಅಶೋಕ್, ನಗೀನಾಬಾನು, ಜುಗುನಿ, ನೂರ್‍ಜನ್, ಗ್ರಾಪಂ ಮಾಜಿ ಸದಸ್ಯ ಸೈಯದ್ ಏಜಸ್ ಪಾಷಾ, ರಾಜ್ಯ ತೆಂಗಿನ ನಾರು ಉತ್ಪಾದಕರ ಸಂಘದ ನಿರ್ದೇಶಕ ಅಶೋಕ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin